Friday, September 24, 2021

ಸೂರ್ಯ SOORYA - CZESLAW MILOSZ'S 'THE SUN'

ಮೂಲ: THE SUN

ಕವಿಚೆಸ್‌ವಾಫ಼್ ಮಿವಾಶ್, ಪೋಲಂಡ್; Czesław Miłosz, Poland 

Translated from the original Polish by Czesław Miłosz 

ಕನ್ನಡಕ್ಕೆಎಸ್ ಜಯಶ್ರೀನಿವಾಸ ರಾವ್

 

ಸೂರ್ಯ

 

ಎಲ್ಲಾ ಬಣ್ಣಗಳೂ ಸೂರ್ಯನಿಂದ ಬರುತ್ತವೆ.  ಆದರೆ ಅದಕ್ಕೆ ಯಾವ 

ನಿರ್ದಿಷ್ಟವಾದ ಬಣ್ಣವಿಲ್ಲ, ಯಾಕೆಂದರೆ ಅದು ಎಲ್ಲವನ್ನೂ ಒಳಗೊಂಡಿದೆ.

ಈ ಇಡೀ ಭೂಮಿ ಒಂದು ಕವನದ ಹಾಗೆ

ಆದರೆ ಆಗಸದಲ್ಲಿರೋ ಸೂರ್ಯನೊಬ್ಬನೇ  ಕಲಾವಿದನನ್ನು ಪ್ರತಿನಿಧಿಸುತ್ತಾನೆ.

 

ಈ ವರ್ಣವೈವಿಧ್ಯಮಯ ಲೋಕವನ್ನು ಚಿತ್ರಿಸುವವರು ಯಾರೇ ಆದರೂ

ಅವನು ನೇರವಾಗಿ ಮೇಲೆ ಸೂರ್ಯನೆಡೆಗೆ ನೋಡದೇ ಇರಲಿ

ನೋಡಿದರೆ ಅವನು ನೋಡಿದ್ದ ವಸ್ತುಗಳ ನೆನಪು ಕಳೆದುಕೊಳ್ಳುವನು.

ಉರಿವ ಕಣ್ಣೀರು ಮಾತ್ರ ಅವನ ಕಂಗಳಲ್ಲಿ ಉಳಿಯುತ್ತೆ.

 

ಅವನು ಮಂಡಿಯೂರಲಿ, ಮುಖವನ್ನು ಹುಲ್ಲಿನ ಕಡೆಗೆ ಇಳಿಸಲಿ,

ನೆಲವು ಪ್ರತಿಬಿಂಬಿಸುವ ಬೆಳಕನ್ನು ನೋಡಲಿ.

ನಾವು ಕಳಕೊಂಡದ್ದನ್ನೆಲ್ಲ ಅವನು ಅಲ್ಲಿ ಕಾಣುವನು:

ನಕ್ಷತ್ರಗಳು, ಗುಲಾಬಿಗಳು, ಮುಸ್ಸಂಜೆಗಳು, ಮುಂಜಾನೆಗಳು.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...