Saturday, October 2, 2021

ಬೇರೆ ಎಲ್ಲೋ BE:RE ELLO: - EWA LIPSKA'S "ELSEWHERE"

ಮೂಲELSEWHERE

ಕವಿಏವಾ ಲೀಪ್ಸ್‌ಕ, ಪೋಲಂಡ್; EWA LIPSKA, Poland

Translated from the Polish into English by ROBIN DAVIDSON & EWA ELZBIETA

ಕನ್ನಡ ಅನುವಾದಸ್. ಜಯಶ್ರೀನಿವಾಸ ರಾವ್

 

ಬೇರೆ ಎಲ್ಲೋ

 

ನಾನು ಬೇರೆ ಎಲ್ಲೋ ಇರಲು ಬಯಸುವೆ.

ಕೈ-ಕಸೂತಿ ಹಾಕಿದ ಊರುಗಳಲ್ಲಿ.

 

ಈ ಪ್ರಪಂಚದಲ್ಲಿ ಹುಟ್ಟದೇ ಇದ್ದವರನ್ನು

ಭೇಟಿಯಾಗಲು ಬಯಸುವೆ.

 

ಕೊನೇಗೂ ನಾವು ಸಂತೋಷವಾಗಿ ಏಕಾಂತದಲ್ಲಿ ಇರುವೆವು.

ಯಾವ ನಿಲ್ದಾಣವೂ ಕಾಯುತ್ತಿರುವುದಿಲ್ಲ ನಮಗಾಗಿ.

 

ಆಗಮನವಿಲ್ಲ. ನಿರ್ಗಮನವಿಲ್ಲ.

ಮ್ಯೂಜ಼್ಯಮ್‌ನಲ್ಲಿ ಕ್ಷಣಭಂಗುರತೆ.

 

ನಮಗಾಗಿ ಯಾವ ಕದನವೂ ಕಾದಾಡುವುದಿಲ್ಲ.

ಮಾನವಜಾತಿ ಇಲ್ಲ.  ಸೈನ್ಯವಿಲ್ಲ.  ಅಸ್ತ್ರವಿಲ್ಲ.

 

ಅಮಲೇರಿದಾಗಿನ ಮೃತ್ಯು.  ಅದರ ಮೋಜೇ ಬೇರೆ.

ಲೈಬ್ರರಿಯಲ್ಲಿ ಬಹು-ಸಂಪುಟಗಳಷ್ಟು ಸಮಯ.

 

ಪ್ರೇಮ.  ಒಂದು ಹುಚ್ಚು ಅಧ್ಯಾಯ.

ಹೃದಯದ ಪುಟಗಳನ್ನ ಪಿಸುಮಾತಿನಲ್ಲಿ ತಿರುಗಿಸುವುದು.


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...