Saturday, October 2, 2021

ಕಿರು-ಕಾದಂಬರಿ KIRU-KADAMBARI - PIOTR MATYWIECKI'S "NOVELLA"

ಮೂಲNOVELLA

ಕವಿಪ್ಯೋತ್ರ್ ಮಾತಿವಿಯೆಚ್‌ಸ್ಕಿಪೋಲಂಡ್ PIOTR MATYWIECKI, POLAND

TRANSLATED FROM THE POLISH BY RYSZARD REISNER

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಕಿರು-ಕಾದಂಬರಿ

 

ಇಜ಼್ರೇಲಿನಲ್ಲಿರುವ ಯಹೂದಿಯೊಬ್ಬಳು

ಯುದ‌್ಧದ ಮುಂಚೆ ಪೋಲಂಡ್ ಬಿಟ್ಟು ಹೋದವಳು

ಬರೆಯುವಳು ಪತ್ರಗಳು ಪೋಲಂಡ್‌ನಲ್ಲಿರುವ ತನ್ನ ಸೋದರಿಗೆ 

ನನ್ನ ಅಮ್ಮನಿಗೆ.  

ಆರರಲ್ಲಿ ಒಬ್ಬಳು.

ನಾಲ್ಕು ಮಂದಿಯ ಹತ್ಯೆಯಾಯಿತು, ಅವರ ಗಂಡಂದಿರ ಮತ್ತು ಮಕ್ಕಳ ಸಹಿತ.

ಅವಳು ಬರೆಯುತ್ತಾಳೆ ಮುಪ್ಪಿನ ಬಗ್ಗೆ, ಬಿಸಿಲಿನ ಬಗ್ಗೆ,

ಮೊಮ್ಮಕ್ಕಳ ಬಗ್ಗೆ, ಮತ್ತೇನೂ ಇಲ್ಲ.

ನನ್ನಮ್ಮ ಇವನ್ನೆಲ್ಲಾ ಓದಿ

ಉತ್ತರ ಬರೆಯುತ್ತಾಳೆ, ಹೆಚ್ಚೇನೂ ಇಲ್ಲ.

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...