Sunday, October 24, 2021

ಭೂಮಿ-ಬಣ್ಣದ ಗೀತ BHUMI-BANNADA GEETA - HANS MAGNUS ENZENSBERGER's "AN EARTH-COLOURED DITTY"

ಮೂಲAN EARTH-COLOURED DITTY

ಕವಿಹನ್ಸ ಮಾಗ್ನುಸ್ ಎನ್ಸೆನ್ಸಬsಗರ್ಜರ್ಮನಿ

HANS MAGNUS ENZENSBERGER, GERMANY

Translated from the German by ESTHER KINSKY

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 

ಭೂಮಿ-ಬಣ್ಣದ ಗೀತ

 

ಮೃತ್ಯು ಬಗ್ಗೆ ಇನ್ನೊಂದು ಕವನ, ಇತ್ಯಾದಿ ಇತ್ಯಾದಿ – 

ಅಗತ್ಯವಾಗಿ, ಆದರೆ ಆ ಆಲೂಗಡ್ಡೆಯ ಬಗ್ಗೆ ಏನನ್ನುತ್ತೀರಿ?

ತಿಳಿದಿರುವ ಕಾರಣಗಳಿಗಾಗಿ ಹೊರೆಸ್ ಆಗಲಿ 

ಹೋಮರ್ ಆಗಲಿ ಅದನ್ನು ಉಲ್ಲೇಖಿಸಲಿಲ್ಲ, ಆ ಆಲೂಗಡ್ಡೆಯನ್ನು. 

ಆದರೆ ರಿಲ್ಕ ಅಥವಾ ಮಲಾರ್ಮೆ ಗೆ ಏನಾಯಿತು?

ಅದು ಅವರನ್ನು ತಟ್ಟಲಿಲ್ಲವೇ, ಆ ಆಲೂಗಡ್ಡೆ?

ಅದು ಕೆಲವೇ ಪದಗಳ ಜತೆ ಪ್ರಾಸವಾಡಬಲ್ಲುದೆಂಬ 

ಕಾರಣವೇ, ಆ ಭೂಮಿ-ಬಣ್ಣದ ಆಲೂಗಡ್ಡೆ?

ಅದು ಸ್ವರ್ಗದ ಬಗ್ಗೆ ಹೆಚ್ಚೇನೂ ಮಂಡೆಬಿಸಿ ಮಾಡಿಕೊಳಲ್ಲ.

ಅದು ತಾಳ್ಮೆಯಿಂದ ಕಾದಿರುತ್ತೆ, ಆ ಆಲೂಗಡ್ಡೆ,

ನಾವದನ್ನು ಬೆಳಕಿನೆಡೆಗೆ ಎಳೆದು ತಂದು

ಬೆಂಕಿಯಲ್ಲಿ ಎಸೆಯುವವರೆಗೂ.  ಆ ಆಲೂಗಡ್ಡೆ

ತಲೆಕೆಡಿಸಿಕೊಳ್ಳಲ್ಲ, ಆದರೆ ಅದರ ತಾಪ

ಹೆಚ್ಚಾಯಿತೇನೋ ಕವಿಗಳಿಗೆ, ಆ ಆಲೂಗಡ್ಡೆಯ ತಾಪ?

ಇರಲಿ, ಸ್ವಲ್ಪ ಹೊತ್ತು ಕಾಯುವ ನಾವು

ಅದನ್ನು ತಿನ್ನುವವರೆಗೂ, ಆ ಆಲೂಗಡ್ಡೆಯನ್ನು,

ಹಾಡೋಣ ಅದರ ಬಗ್ಗೆ, ಆಮೇಲೆ ಮರೆತು ಬಿಡೋಣ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...