Sunday, October 24, 2021

ತಕ್ಕಡಿ TAKKADI - GOPAL HONNALGERE's "BALANCE"

ಮೂಲ: BALANCE 

ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ

GOPAL HONNALGERE, Indian-English poet of Kannada origin

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ತಕ್ಕಡಿ

 

ಇದು ಒಂದು ತಕ್ಕಡಿ

 

ಅಲ್ಲಿ

ತಕ್ಕಡಿಯ ಎಡಭಾಗದ ತಟ್ಟೆಯಲ್ಲಿ,

ಕೆಲವರು ದಿಜನರು

ಅವರೊಂದು ಹಂದಿಯನ್ನು ತೂಕಮಾಡಬೇಕಂತೆ.

ಅವರ ಹತ್ತಿರ ಒಂದು ದೊಡ್ಡ ಆದಿಕಾಲದ ತಕ್ಕಡಿಯಿದೆ

ಆದರೆ ತೂಗಲು ತೂಕಗಳಿಲ್ಲ.  ಅವರು

ಹಂದಿಯನ್ನು ತಕ್ಕಡಿಯ ಎಡ ತಟ್ಟೆಯಲ್ಲಿಡುತ್ತಾರೆ.

ಮತ್ತೊಂದು ತಟ್ಟೆಯಲ್ಲಿ

ಕೆಲ ಕಲ್ಲುಗಳು.  ತೂಕ ಸರಿಸುಮಾರು

ಸಮನಾದಾಗ, ಅವರು ಕಲ್ಲುಗಳನ್ನು

ಚೀಲದಲ್ಲಿ ತುಂಬುತ್ತಾರೆ, ಅವರು ಕೈಗಳಿಂದ

ಚೀಲವನ್ನು ಎತ್ತುತ್ತಾರೆ, ಅದರ ತೂಕದ 

ಅಂದಾಜು ಮಾಡುತ್ತಾರೆ.

 

ಇಲ್ಲಿ

ತಕ್ಕಡಿಯ ಬಲಭಾಗದ ತಟ್ಟೆಯಲ್ಲಿ 

ಕೆಲವರು ಸಾಹಿತ್ಯ ವಿಮರ್ಶಕರು

ಅವರ ಹತ್ತಿರ ಒಂದು ಸಣ್ಣ ಪರಿಷ್ಕೃತ ತಕ್ಕಡಿಯಿದೆ.

ಆದರೆ, ಅವರಲ್ಲಿಯೂ ತೂಗಲು ತೂಕಗಳಿಲ್ಲ.

ಕವಿಯೊಬ್ಬ ತನ್ನ ಇಪ್ಪತ್ತು ಕವನ ಸಂಕಲನಗಳನ್ನು ತರ್ತಾನೆ

ಅವು ಅವನ ಜೀವಮಾನದ ಸಾಹಿತ್ಯ ಕೃಷಿ.  

ಅವನ ಪುಸ್ತಕಗಳನೆಲ್ಲವನ್ನೂ

ಅವರು ಎಡ ತಟ್ಟೆಯಲ್ಲಿ ಇಡುತ್ತಾರೆ.

ಮತ್ತೊಂದು ತಟ್ಟೆಯಲ್ಲಿ ಅವರು 

ಮೆಲ್ಲಮೆಲ್ಲನೆ ಸಾಹಿತ್ಯ ವಿಮರ್ಶೆಯ ಪುಸ್ತಕಗಳನ್ನು

ಒಂದೊಂದೇ ಸೇರಿಸುತ್ತಾ ಹೋಗುತ್ತಾರೆ

ತೂಕ ಸಮನಾಗುವವರೆಗೂ.

ಆಮೇಲೆ ಅವರು ವಿಮರ್ಶೆಯ ಪುಸ್ತಕಗಳನ್ನು

ಒಂದು ಬ್ರೀಫ಼್‌ಕೇಸ್‌ನಲ್ಲಿ ಹಾಕಿ

ಬ್ರೀಫ಼್‌ಕೇಸ್‌‌ನ್ನು ಗಾಳಿಯಲ್ಲಿ ಎತ್ತಿಹಿಡಿದು 

ಅದರ ತೂಕದ ಅಂದಾಜು ಮಾಡುತ್ತಾರೆ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...