ಮೂಲ: A for Ant
ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ
GOPAL HONNALGERE, Indian-English poet of Kannada origin
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಇ ಅಂದ್ರೆ ಇರುವೆ
ಒಂದು ಸೇಬಿನ ಹಣ್ಣನ್ನು ಊಹಿಸಿಕೊಳ್ಳಿ
ಆ ಸೇಬಿನ ಹಣ್ಣು
ಗುರುತ್ವಾಕರ್ಷಣೆಯ ಎಲ್ಲಾ ನಿಯಮಗಳನ್ನು
ಉಲ್ಲಂಘಿಸಿ
ಗಾಳಿಯಲ್ಲಿ ನೇತು ನಿಂತಿದೆ.
ಒಂದು ಇರುವೆಯನ್ನು ಊಹಿಸಿಕೊಳ್ಳಿ
ಆ ಸೇಬಿನ ಹಣ್ಣಿನ ಮೇಲೆ ಸಿಕ್ಕಿಬಿದ್ದು
ಮೇಲೆ ಕೆಳಗೆ ಓಡಾಡುತ್ತಾ
ಬಿಡುಗಡೆಯ ದಾರಿ ಹುಡುಕುತಿದೆ.
ಬಿಡುಗಡೆಯ ದಾರಿ ಇದೆ
ಆ ಇರುವೆಗೆ ಬುದ್ಧಿಯಿರುವುದಾದರೆ
ಗುರುತ್ವಾಕರ್ಷಣೆಯನ್ನು ಒಪ್ಪಿ
ಅದು ಕೆಳ ಬೀಳಬೇಕು
ಇಲ್ಲಾ
ಸೇಬಿನ ಹಣ್ಣಿನಲ್ಲಿ ಮನೆ ಮಾಡಿ
ಸೇಬು-ಲೋಕದಲ್ಲಿ ವಾಸ ಮಾಡಬೇಕು
ಸೇಬು ಸಾಕು ತಿನ್ನಲಿಕ್ಕೆ
*****
No comments:
Post a Comment