ಮೂಲ: OUT OF MY EYES
ಕವಿ: ಪ್ಯೋತ್ರ್ ಮಾತಿವಿಯೆಚ್‌ಸ್ಕಿ, ಪೋಲಂಡ್ PIOTR MATYWIECKI, POLAND
TRANSLATED FROM THE POLISH BY RYSZARD REISNER
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನನ್ನ ಕಣ್ಣುಗಳಿಂದ
ನನ್ನ ಕಣ್ಣುಗಳಿಂದ ಕನಸೊಂದು ತೇಲಿಕೊಂಡು ಹೋಯಿತು
ನಾನು ಕಿಟಕಿಯ ಬಳಿ ಹೋಗುತ್ತೇನೆ
ಪರದೆಗಳನ್ನು ಸರಿಸುತ್ತೇನೆ
ಕಿಟಕಿಯಾಚೆ ಕನಸೊಂದು ತೇಲಿಕೊಂಡು ಹೋಗುತ್ತಿದೆ
ನೀಲಿಆಕಾಶ ಸರಿಯುತ್ತೆ ನನ್ನನ್ನು ಕಾಣಿಸುತ್ತೆ
ದುಃಸ್ವಪ್ನವೊಂದು ನನ್ನ ಮೇಲೆರಗಿದೆ
ನನ್ನ ಕಣ್ಣುಗಳು ಬರೀ ಗೋಡೆಗಳಷ್ಟೇ
ನಾನು ಹಗಲನ್ನು ಕಾಣುವೆ
ನನ್ನ ಕಣ್ಣುಗಳಿಂದ ದಿನವೊಂದು ತೇಲಿಕೊಂಡು ಹೋಗುತ್ತೆ
ನಾನು ಪರದೆ ಸರಿಸಿದಾಗ ಬೂದುಆಕಾಶ ಕಾಣುತ್ತೇನೆ
ಸಂಜೆಯ ಸಮೀಪಿಸುವೆ
ನಿದ್ದೆಗಾಗಿ ಕಾಯುವೆ
ಕತ್ತಲು ಪರದೆ ಸರಿಸಿದಾಗ ನನ್ನನ್ನು ಕಾಣುತ್ತೆ
ನನ್ನ ಮೇಲೆಗರುತ್ತೆ
ಕನಸಿದ ಕನಸೊಂದು
ಮರಳುವ ದಿನವೊಂದು
*****
No comments:
Post a Comment