Tuesday, October 26, 2021

ನಯಾಗರ ಜಲಪಾತ NIAGARA JALAPATA - GOPAL HONNALGERE'S 'NIAGARA FALLS'

ಮೂಲ: NIAGARA FALLS

ಕವಿ: ಗೋಪಾಲ ಹೊನ್ನಲಗೆರೆ, ಕನ್ನಡ ಮೂಲದ ಇಂಗ್ಲಿಷ್ ಭಾಷಾ ಕವಿ

GOPAL HONNALGERE, Indian-English poet of Kannada origin

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ನಯಾಗರ ಜಲಪಾತ

 

ನಯಾಗರ ಜಲಪಾತ ನಯಾಗರ ಜಲಪಾತ

ಗರ್ಜಿಸುತ್ತ ಗುಡುಗುತ್ತ ನುಗ್ಗುತ್ತ

ನೀರು ಬೀಳುತ್ತೆ ನೀರು ಬೀಳುತ್ತೆ

ನಯಾಗರ ಸುರಿಯುತ್ತೆ ನೀರು ಸುರಿಯುತ್ತೆ

ನಯಾಗರ ಜಲಪಾತದ ನುಗ್ಗುವ 

ನೀರಿನಲಿ ಪದಗಳೆಲ್ಲವೂ

ನೀರ್‌ಗುಳ್ಳೆಗಳ ಹಾಗೆ

ಅಂದ್ರೆ, ಇಲ್ಲಿಯ ನೀರಿನ ಅಬ್ಬರದಲಿ

ಬುದ್ಧ ಏನಾದರೂ ಎಲ್ಲ ತೊರೆದು 

ಬತ್ತಲೆಯಾಗಿ ಕಿವಿಗೆ ಹತ್ತಿ ತುರಿಕಿಕೊಳ್ಳದೇ

ಒಂದೇ ಕ್ಷಣ ನಿಂತನೆಂದಾದರೂ

ಈ ನಯಾಗರ ಜಲಪಾತದ ನೀರಿನ 

ಅಬ್ಬರಕ್ಕೆ ಅಂವ ಕಿವುಡಾಗುವ

 

ನಯಾಗರ ಜಲಪಾತ ನಯಾಗರ ಜಲಪಾತ

ನೀರು ಬೀಳುತ್ತೆ ನೀರು ಬೀಳುತ್ತೆ

ನಯಾಗರ ಜಲಪಾತದ ಹತ್ತಿರ ವಾಸಿಸುವ

ಇಂಜಿನಿಯರಗಳು ಕೆಲಸಗಾರರು

ಅವರ ಹೆಂಡರು ಅವರ ಮಕ್ಕಳು

ಈ ಜಲಪಾತದ ಅಬ್ಬರವ 

ಪೂರಾ ಕುಡಿದಿದ್ದಾರೆ

ಅವರಿಗೇನೂ ಆಗಲ್ಲ

ನಯಾಗರ ಸುರಿಯುತ್ತೆ ನೀರು ಸುರಿಯುತ್ತೆ

ಅವರ ನಿತ್ಯದ ದಿನಚರಿಯಂತೆ

 

 

ನಯಾಗರ ಬೀಳುತ್ತೆ ನಯಾಗರ ಬೀಳುತ್ತೆ

ನೀರು ಬೀಳುತ್ತೆ ನೀರು ಬೀಳುತ್ತೆ

ಆದರೆ ಒಂದು ಸಲ ಮಾತ್ರ

ಕೆಲವು ಕ್ಷಣಗಳ ಮಟ್ಟಿಗೆ 

ನಯಾಗರ ಜಲಪಾತ

ನಿಜಕ್ಕೂ ಬಿದ್ದೇ ಬಿಟ್ಟಿತ್ತು

ನೀರು ಬೀಳುವುದು ನಿಂತಿತು

ಬುದ್ಧನ ಮಹಾ ಮೌನದ ಸನ್ನಿಧಿಯಲ್ಲಿ

ಸೃಷ್ಟಿಯು ಉಗ್ರವಾದ ಎಡತಿರುವು 

ತೆಗೆದುಕೊಂಡಿರುವಂತೆ 

ಇಂಜಿನಿಯರಗಳು ಕೆಲಸಗಾರರು

ಅವರ ಹೆಂಡರು ಅವರ ಮಕ್ಕಳು

ಕಿರುಚಿದರು ಮೂರ್ಛೆಹೋದರು

ಈ ನಿಶ್ಶಬ್ಧವು ಅವರ ತಲೆಗೆ 

ಅಪ್ಪಳಿಸಿದ ಒಂದು 

ಮಹಾ ಸಿಡಿಲೇನೋ ಎಂಬಂತೆ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...