Wednesday, December 29, 2021

ಬೆಂಕಿಯ ರಮ್ಯಕತೆ BENKIYA RAMYAKATHE - MONICA AASPRONG's 'FAIRY TALE OF THE FIRE'

Here is a poem by the NORWEGIAN poet MONICA AASPRONG ... this is an untitled poem originally, even in its English translation ... 

 

ಮೂಲFAIRY TALE OF THE FIRE

ಕವಿಮೊನಿಕಾ ಆಸ್ಪ್ರಾಂಗ್ನಾರ್ವೇ

MONICA AASPRONG, NORWAY

Translated from the Norwegian into 

English by MAY-BRIT AKERHOLD

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಬೆಂಕಿಯ ರಮ್ಯಕತೆ

 

ನಿನಗೆ ಬಲು ಇಷ್ಟವಾದ ರಮ್ಯಕತೆಯ ಹೇಳುವೆ. 

ಬೆಂಕಿಯ ಕತೆ:

 

ನಾನು ಕಾಡಲ್ಲಿ ಬೆಂಕಿಯ ಕಂಡೆ

ಬೆಂಕಿ ನನ್ನನ್ನು ಕಂಡು

ನೋಡಿತು ನನ್ನನ್ನು ಉರಿಯುವ ಕಣ್ಗಳಿಂದ 

ಅದು ಬಂದಿತು ಹತ್ತಿರ ಹತ್ತಿರ

ಬಿಸಿ ಬೆಚ್ಚಗಾಯಿತು

ಅದರ ಹಳದಿ ಕೈಗಳಿಂದ

ಅದರ ಕೆಂಪು ಮುಖದಿಂದ

 

ಅದು ನಿಂತಿತು, ಕೇಳಿತು:

ನನ್ನ ಸಂಗ ಬರುವೆಯಾ ಕಾಡಿನೊಳಕ್ಕೆ

ಬಾ ನನ್ನ ಸಂಗ ಮರಗಳ ನಡುವೆ

ಹುಲ್ಲಿನ ಮಧ್ಯೆ

ಬಯಲು ದಾಟಿ, ನಾ ಹೋಗುವೆ

ಭೂಮಿಯ ಒಳಗೆ, ಬೆಂಕಿ ಹೇಳಿತು

ಅದರ ತೊಗಟೆ ಭರಿತ ಬಾಯಿಂದ

ಅದರ ಕುಸುಮ ಭರಿತ ದನಿಯಿಂದ

 

ನಾನದರ ಜತೆ ಸೇರಿದೆ ಅದರ ಪಯಣದಲಿ

ಅದರ ಬದಿ ನಡೆದೆ ಕತ್ತಲಲಿ

 

ನಾ ದಾರಿ ತೋರಿಸುವೆ, ಎಂದಿತು ಬೆಂಕಿ


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...