Saturday, December 18, 2021

ಕದ್ದ ಕವನ KADDA KAVANA - CEES NOOTEBOOM'S 'STOLEN POEM'

ಮೂಲ: STOLEN POEM

ಕವಿCEES NOOTEBOOM, NETHERLANDS 

ಸೇಸ್ ನೋಟಬೂಮ್ನೆದರ್ಲ್ಯಾಂಡ್ಸ

Translated from the Dutch by David Colmer

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಕದ್ದ ಕವನ

 

ಉದ್ಯಾನದ ಮೂಲೆಯಲ್ಲಿರುವ ದಟ್ಟವಾದ ಪೊದೆಗಳಿಗೆ,

ಎಲ್ಲವೂ ತೆರೆದು ಬಿದ್ದಿದೆ, ಯಾವುದೋ ನಿಗೂಢವಾದ ಹಿಡಿತದಲ್ಲಿದ್ದಂತೆ.

 

ಬೇಸಿಗೆಯು ಸುಟ್ಟಿತ್ತು ನಮ್ಮನ್ನು, ಕೆರೆಯ ನೀರು 

ಹಿತವಾಗಿತ್ತು ಸಿಹಿಯಾಗಿತ್ತು,

ಯಾತನೆಗಳ ಪ್ರಲಾಪಗಳ ತಾಸಾಗಿತ್ತು.

 

ಉಗುರುಗಳು ಎಷ್ಟೊಂದು ಆತ್ಮವಿಶ್ವಾಸದಿಂದ ಬೆಳೆಯುತ್ತವೆ,

ನಿನ್ನರಿವಿನೊಂದಿಗೆ ನೀನೂ ಬದುಕಲು ಕಲಿಯಬೇಕು.

 

ನಾನು? ಹಿಂದೊಮ್ಮೆ ಇಲ್ಲಿ ವಾಸವಾಗಿದ್ದವನು ನಾನೇನಾ,

ಈಗ ಇಲ್ಲಿ ಮತ್ತೊಮ್ಮೆ ಮರಳಿ ಬಂದವನು? 

 

ಈ ಎಲ್ಲದರಲ್ಲಿ ಉಳಿದಿದೆ ಸ್ವಲ್ಪ ಮಾತ್ರವೇ,

ಅಳಿವನ್ನು ತಡೆಯಬಲ್ಲ ಬರಹವೊಂದೇ.

 

ಶಾಂತವಾಗಿ ಕೂತು, ಆಲಿಸು ನಮ್ಮ ಅಂತಿಮ ಕಡಲಳಲುಗಳನ್ನು,

ಯಾರ ಜತೆ ನಾನು ಸ್ವಾದಿಸಲಿ ನನಗಾಗಿ ಉಳಿಸಿದ ಈ ಕಂಪನ್ನು?

 

ಎಲ್ಲವೂ ಇಲ್ಲಿಂದ ಚಿಮ್ಮುತ್ತೆ:

ಅತ್ಯಲ್ಪವಾದ ತಾಣದಲ್ಲಿ

 

ಬಂಡೆಯಡಿಯಲ್ಲಿರುವ

ನೆರಳಿನಲಿ.

 

ಇರು, ನೀನಾಗಿ.

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...