Saturday, December 18, 2021

ಕವನ KAVANA - CEES NOOTEBOOM'S 'POEM'

ಮೂಲ: POEM

ಕವಿCEES NOOTEBOOM, NETHERLANDS 

ಸೇಸ್ ನೋಟಬೂಮ್ನೆದರ್ಲ್ಯಾಂಡ್ಸ

Translated from the Dutch by David Colmer

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 


ಕವನ

 

ಒಂದು ಕವನ ಹೇಗೆ ಕಾಣಬೇಕೆಂದು

ಗೊತ್ತಿದೆಯಾ ನಿನಗೆ?

ಅಡಿಯಿಂದ, ಬದಿಯಿಂದ, ಹಿಂದಿನಿಂದ?

ಅಂಕಿಗಳು? ಅಕ್ಷರಗಳು?

ಮತ್ತೆ ಬಣ್ಣ?

 

ಅಲೆಗಳ ತರ ಇರಬೇಕಾ,

ಅಂದ್ರೆ ಯಾವ ತರದ ಅಲೆಗಳು?

ಕಡಲ, ಕೆರೆಯ, ನದಿಯ?

ಅಲ್ಲಿ ಎಲ್ಲರಿಗೂ ಜಾಗ ಇರಬೇಕಾ,

ಬೆಲೆ ಎಷ್ಟಿರಬೇಕು?

 

ನಾನು ಬಲ್ಲೆ ಕೆಲವು ಕವನಗಳ 

ಎಷ್ಟು ವಯಸ್ಸಾದವು ಅಂದರೆ

ಕೈ ಹಿಡಿದು ರಸ್ತೆ ದಾಟಿಸಬೇಕಾಗುತ್ತೆ.

ಮತ್ತೆ ಕೆಲವು ಕುರುಡಾಗಿದ್ದವು,

ಆದರೆ ಯೌವನ ಕುಸುಮಿತ

ನಾರಿಯರೂ ಇದ್ದರು,

ಕೆಚ್ಚಲುಣ್ಣುವ ಕುರಿಮರಿಗಳ ಹಾಗೆ ಯೋಚನೆಗಳು

ಪ್ಪುವ ತುಟಿಗಳು.

 

ಯಾವ ನಿಯಮಗಳೂ ಇಲ್ಲ,

ಮುರ್ಷಿದ್ ಬಾಬಾ ಹೇಳಿದ, ಕೆಲವೊಮ್ಮೆ

ಅವು ಸ್ಟಾಕುಗಳು ಬಾಂಡುಗಳ ತರ, ಮತ್ತೆ

ಕೆಲವೊಮ್ಮೆ ಬಾದಾಮ್-ಬರ್ಫಿಯ ತರ ಎಂದು 

ಆತ ಮಕ್‌ಬರಾದ ಸಂಗಮವರಿ 

ಮೆಟ್ಟಲುಗಳ ಮೇಲೆ ಕುಣಿದಾಡಿದ

 

ವಿಷಪೂರಿತ ಸುನೀತವೊಂದರಿಂದಾಗಿ 

ಸಾಯುವ ಒಂದು ದಿನ

ಮುನ್ನ.


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...