Tuesday, January 25, 2022

ಬಹುಶಃ ಅದೇ ಉತ್ತಮೆವೆಂದನಿಸುತ್ತದೆ AMANDA AIZPURIETE's "THAT PROBABLY WOULD BE BEST"

ಮೂಲTHAT PROBABLY WOULD BE BEST

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Ieva Lešinska

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


 

ಬಹುಶಃ ಅದೇ ಉತ್ತಮೆವೆಂದನಿಸುತ್ತದೆ

 

ಬಹುಶಃ ಅದೇ ಉತ್ತಮೆವೆಂದನಿಸುತ್ತದೆ – 

ಮುದ್ರಣಾಲಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು, 

ಆ ಅಚ್ಚುಕಟ್ಟಾದ ಗಂಭೀರ ಅಕ್ಷರಗಳಿಗೆ ನನ್ನ ಪದಗಳ ತನಕ

ಬರುವುದಕ್ಕೆ ಅನುಮತಿ ಕೊಡದೇ ಇರುವುದು – 

ಲ್ಲವನ್ನೂ ನನ್ನ ಕೈಬರಹದ ಕೊಂಕು ರೇಖೆಗಳಲ್ಲೇ ಬಿಟ್ಟುಬಿಡುವುದು,

ಅಂಕುಡೊಂಕು, ಏರುಪೇರು, ಜೀವನದ ಹಾಗೆ.

 

ಬರಹದಿಂದ ತುಂಬಿದ ಹಾಳೆಗಳನ್ನು ಮಡಿಸಿ 

ಹಡಗುಗಳನ್ನಾಗಿ, ಹಕ್ಕಿಗಳನ್ನಾಗಿ, ಚಿಟ್ಟೆಗಳನ್ನಾಗಿ ಮಾಡಿ, 

ಅವುಗಳನ್ನು ಆಕಾಶಕ್ಕೆ ಸೆಯಬೇಕು,

ಗಾಳಿಯೊಳಗೆ, ಬೆಂಕಿಯೊಳಗೆ, ನೀರಿನೊಳಗೆ ಎಸೆಯಬೇಕು.  

ನಂತರ ಅವು ಬೂದಿಯಾಗಿ ಅಥವಾ 

ಒದ್ದೆ ಕಾಗದದ ಚೂರುಗಳಾಗಿ ಅಥವಾ ಬಳಲಿದ ಚಿಟ್ಟೆಗಳಾಗಿ ಬಂದು

ಪೂಜ್ಯಭಾವದಲ್ಲಿ ಭೂಮಿಯನ್ನು ಸ್ಪರ್ಶಿಸುವವು.   

 

ಭೂಮಿಯು ಅರ್ಧಚಂದ್ರಾಕಾರದ ನಾಲ್ಕು ಎಸಳುಗಳ 

ಹೂವೊಂದನ್ನು ಚಿಗುರಿಸುವುದು – 

ನನ್ನ ಅತಿ ಸುಂದರವಾದ ಚೌಪದಿ.  

ಗಾಳಿಯಲ್ಲಿ ಸಿಕ್ಕ ಪರಾಗವು ಹಾರುವುದು ಹೊಸ ಮಣ್ಣನ್ನು ಹುಡುಕಿ, 

ಜನರು ಈ ವಿಲಕ್ಷಣ ಸುವಾಸನೆಯ ಗಾಳಿಯನ್ನು ಆಘ್ರಾಣಿಸುವರು ... 

 

ಮತ್ತೆ ಬೇರೊಂದು ಬದುಕಿನಲ್ಲಿ

ನನ್ನನ್ನು ಅಪ್ಪಿಕೊಳ್ಳುವುದು ಪ್ರೇಮಿಯಾಗಿ ಮಾರ್ಪಟ್ಟ ಕವನವೊಂದು, 

ನಾನು ಎಂದೋ ಮರೆತುಹೋದ ಕವನವೊಂದು.

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...