Thursday, January 27, 2022

ನಾನು ನನ್ನ ಮರಿಮರಿಮರಿಮಗಳನ್ನು ಹೋಲುತ್ತೇನೆ AMANDA AIZPURIETE's 'I RESEMBLE MY GREATGREATGREATGRANDDAUGHTER'

ಮೂಲ: I RESEMBLE MY GREATGREATGREATGRANDDAUGHTER

ಕವಿ: ಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Ieva Lešinska

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ನಾನು ನನ್ನ ಮರಿಮರಿಮರಿಮಗಳನ್ನು ಹೋಲುತ್ತೇನೆ

 

ನಾನು ನನ್ನ

ಮರಿಮರಿಮರಿಮಗಳನ್ನು ಹೋಲುತ್ತೇನೆ.

ಅವಳ ಹಾಗೆ, ನಾನೂ ಕಪ್ಪು ಉಡುಪುಗಳನ್ನು

ತೊಡಲು ಬಯಸುವೆ, ಹಳೇ ಚಿತ್ರಗಳನ್ನು ನೋಡಲು, 

ಬರಿಗಾಲಲ್ಲಿ ನಡೆಯಲು – ಈಗಲೂ ನಡೆಯಲು 

ಸಾಧ್ಯವಾಗುವ ಕೆಲವೇ ಕೆಲವು ರಸ್ತೆಗಳಲ್ಲಿ.


ಅವಳ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ.

ಸಮಯದ ಗಾಜಿನ ಎರಡೂ ಕಡೆ ಧೂಳು ಮುಚ್ಚಿದೆ, 

ಆದರೂ ಕೆಲವು ಹೋಲಿಕೆಗಳನ್ನು ಗುರುತಿಸಬಹುದು:

ನನ್ನ ಹಾಗೆ, ಅವಳಿಗೂ ಕತ್ತಲ ಭಯವಿಲ್ಲ, 

ಹೇಗೆ ಖುಷಿಯಾಗಿರಬೇಕೆಂದು ಗೊತ್ತಿಲ್ಲ.

ಅವಳಾಡುವ ಮಾತು ನನಗೆ ಕೇಳಿಸಲ್ಲ 

ಅಥವಾ ಅರ್ಥವಾಗಲ್ಲ.


ಯಾರಂದರು ನನ್ನ ಕಣ್ಗಳಲ್ಲಿ ವಿಚಿತ್ರ ನೋಟವಿದೆಯೆಂದು? 

ನಾನೊಂದು ವಯಸ್ಸಾದ ಹೊಗೆಕವಿದ ಕನ್ನಡಿ

ಅದರೊಳು ನೋಡಿದಳು ಬಹಳ ಹೊತ್ತು 

ನನ್ನ ಮರಿಮರಿಮರಿಮಗಳು

ಈ ದಿನ ಬೆಳಗ್ಗೆ.

*****   


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...