Saturday, January 29, 2022

ಈ ರಾತ್ರಿಯು ತೂತುಗಳಿಂದ ತುಂಬಿದೆ HASSO KRULL's 'THE NIGHT IS FULL OF HOLES'

ಮೂಲTHE NIGHT IS FULL OF HOLES

ಕವಿಹಾಸೊ ಕ್ರಲ್ಎಸ್ಟೋನಿಯಾ HASSO KRULL, ESTONIA

Translated from the Estonian by Brandon Lussier

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್


 

ಈ ರಾತ್ರಿಯು ತೂತುಗಳಿಂದ ತುಂಬಿದೆ

 

ಈ ರಾತ್ರಿಯು ತೂತುಗಳಿಂದ ತುಂಬಿದೆ.  

ಅವು ಮಿನುಗುತ್ತವೆ, ಸೆಟೆಯುತ್ತವೆ, ಮಾರ್ದನಿಸುತ್ತವೆ, 

ಕತ್ತಲಲ್ಲಿ ಕಿಟಿಕಿಗಳು, ಆಕಾಶದಲ್ಲಿ ಕಿಟಕಿಗಳು, 

ಅಸ್ತಿತ್ವದ ಕಿಟಕಿಗಳು, ಅಗತ್ಯವಿಲ್ಲದ ಕಿಟಕಿಗಳು.

 

ನಾವು ಮೆಟ್ಟಲುಗಳ ಮೇಲೆ ನಿಂತು ಸಿಗರೇಟು ಸೇದುತ್ತಿದ್ದೇವೆ.

ಸಿಗರೇಟಿನ ತುದಿಗಳು ಚಲಿಸುವ ಕಿಟಕಿಗಳು,

ಚಲಿಸುವ ತೂತುಗಳು, ಜ್ವಾಲೆಯಿಲ್ಲದ ಬೆಂಕಿ,

ಮತ್ತೆ ನಾವು ಇಲ್ಲಿ ಈ ಮೆಟ್ಟಲುಗಳ ಮೇಲೆ ಇರಬೇಕಾಗಿದೆ.

 

ಈ ಮೆಟ್ಟಲುಗಳ ಮೇಲಿರುವ ಲಾಂದ್ರದೀಪಗಳು,

ಕತ್ತಲಲ್ಲಿ ಕಿಟಕಿಗಾಜುಗಳು.

ನೀನು ದಡದಲ್ಲಿ ನಗ್ನವಾಗಿ ಮಲಗಿದಾಗಿನ ಚಿತ್ರಗಳು 

ಬೆಳಕಿನ ಮರಳಿನಲ್ಲಿ ಬೆಳಗುತ್ತಿದ್ದ ಹಲ್ಲಿಯಂತೆ ಕಾಣುವೆ:

ಒಂದೊಂದು ಮರಳಿನ ಕಣ ಒಂದೊಂದು ಹೊಳೆಯುವ ಕಿಟಕಿ.

 

ಪ್ರತಿ ಕಿಟಕಿ ಒಂದು ರಂಧ್ರ.  ಪ್ರತಿ ರಂಧ್ರ ಒಂದು ಕಿಟಕಿ.

ಹುಟ್ಟಲು ಬಯಸುವವರು ಮಾನವ ಕಿಟಕಿಯಿಂದ ಜಾರಿ ಬರಬೇಕು,

ಸೂರ್ಯ ಚಂದ್ರರ ಕಿಟಕಿಗಳ ಕೆಳಗಿರುವ 

ಅಸ್ತಿತ್ವದ ಕಿಟಕಿಯಿಂದ ಜಾರಿ ಬರಬೇಕು.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...