ಮೂಲ: I REMEMBER
ಕವಿ: ಕ್ರಿಸ್ಟೀನಾ ಮಿಲೊಬೆಡ್ಜ಼್ಕ, ಪೋಲಂಡ್ KRYSTYNA MILOBEDZKA, POLAND
Translated from the Polish by ELŽBIETA WÓJCIK-LEESE
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನನಗೆ ನೆನಪಿದೆ
ಜನನಗಳ ನಂತರ ಮರಣಗಳ ನಂತರ ಜನನಗಳ ನಂತರ
ವರುಷಗಳ ನಂತರ ಇಲ್ಲೇ, ಈ ಜಾಗದಲ್ಲಿ
ನಿನಗೆ ತುಸು ಹತ್ತಿರವಾಗಿ ನಾನೇ ತುಸು ದೂರವಾಗಿ
ನನ್ನ ಮೊದಲ ಮಹಾಯುದ್ಧದಲ್ಲಿ
ನಾ ಸೋತೆ, ಗೆದ್ದೆ
ಗೆದ್ದೆ ನನ್ನನ್ನೇ ಸೋಲುತ್ತಾ
ನನಗೆ ನೆನಪಿಲ್ಲ ಬೇರೆ ಯಾವ ಯುದ್ಧವು
ಇಷ್ಡು ಅನಿಷ್ಟಕರ, ಇವೆಲ್ಲ ಮುಗಿದ ಮೇಲೆ
ನನ್ನ ಮೊದಲ ಎರಡನೆಯ ಯುದ‌್ಧ ಮುಗಿದ ಮೇಲೆ
ಅದೇ ಕಣ್ಣುಗಳು ಬೇರೇನೋ ಕಾಣುತ್ತವೆ
ಅದೇ ಕೈಗಳು ಬೇರೆಯಾಗಿ
ಬಾಯಿ ಬೇರೆಯಾಗಿ
ನನ್ನ ದನಿ
*****
No comments:
Post a Comment