Monday, February 14, 2022

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು AMANDA AIZPURIETE's 'THAT WINTER IT WAS AS COLD AS ON THE PEAK OF EVEREST'

ಮೂಲTHAT WINTER IT WAS AS COLD AS ON THE PEAK OF EVEREST

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು

 

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು

ಅಸಹಾಯಕತೆಯ ಗಡಿಯಲ್ಲಿ ತಣ್ಣಗಿರುವ ಚೆಕ್‌ಪಾಯಿಂಟಿನ ಹಾಗೆ

ನಾವು ಹಲಗೆಗಳನ್ನು ಒಗೆದೆವು ನಮ್ಮ ಚಿಕ್ಕ ಒಲೆಯೊಳಗೆ 

ಶ್ವೇತ ಶೂನ್ಯತೆಯೊಂದು ಕಿಟಕಿಗಾಜುಗಳನ್ನು ನೆಕ್ಕುತ್ತದೆ

ನಾವು ಕೋಣೆಯನ್ನು ಬೆಚ್ಚಗಾಗಿಸಿದೆವು 

ಈಗ ದೊಡ್ಡವರಾಗಿ ಮನೆಬಿಟ್ಟಿರುವ ಕೂಸುಗಳ 

ಮಂಚಗಳನ್ನು ಒಲೆಗೆ ಒಗೆಯುತ್ತಾ

ಫೋಟೊ ಫ಼್ರೇಮುಗಳನ್ನ, ಸ್ಟೂಲುಗಳನ್ನ ಒಲೆಗೆ ಒಗೆಯುತ್ತಾ

ನಂತರ, ನಾನು ಬೆಂಕಿಗೆ ಪುಸ್ತಕಗಳನ್ನು ಉಣಿಸಿದೆ

ಮತ್ತೆ ಮತ್ತೆ ಓದುತ್ತಾ

ಮೆದುಳಲ್ಲಿ ತಂತಾನೆ ಕೊರೆದಿರುವ ಸಾಲುಗಳನ್ನ 

ಬೆಂಕಿಯ ಭಯವಿಲ್ಲದ ಸಾಲುಗಳನ್ನ

ಕಿಟಕಿಗಳು ಹೊಗೆಮಸಿಯಿಂದ ಮೆಲ್ಲ ಮೆಲ್ಲನೆ ಕಪ್ಪಾದವು 

ನಾವು ಅದೃಶ್ಯರಾದೆವು

ಆ ಬಿಸಿಯಲ್ಲಿ

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...