Monday, February 14, 2022

‘ತೋಳ ಚಂದ್ರ'*ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು - AMANDA AIZPURIETE's 'THE WOLF MOON IS A MAGNET'

ಮೂಲTHE WOLF MOON IS A MAGNET SUSPENDED IN THE STARRY EMPTINESS

ಕವಿಅಮಾಂಡ ಐಜ಼ಪುರಿಯೆತ್, ಲ್ಯಾಟ್ವಿಯಾ 

AMANDA AIZPURIETE, LATVIA

Translated from the Latvian by Mārta Ziemelis 

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್


 

ತೋಳ ಚಂದ್ರ*ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು

 

‘ತೋಳ ಚಂದ್ರ’ವು ನಾಕ್ಷತ್ರಿಕ ಶೂನ್ಯದಲ್ಲಿ ತೂಗುತ್ತಿರುವ ಸೂಜಿಗಲ್ಲು

ಊರಿನ ಕತ್ತೆಕಿರುಬಗಳು ಮೂಲೆತಿರುವುಗಳಲ್ಲಿ ಮೆಲ್ಲನೆ ಊಳಿಡುತ್ತವೆ

ಊರಿನ ವೀರರು ಸದ್ದಿಲ್ಲದೇ ಯುದ್ಧಭೂಮಿಯಿಂದ ತೆರಳುತ್ತಿದ್ದಾರೆ

ಬಳಲಿದ ಊರಿನ ದೇವತೆ ನನ್ನ ಕಾಲ್ಚಾಪೆಯ ಮೇಲೆ ದಣಿವಾರಿಸಿಕೊಳ್ಳುತ್ತಿದ್ದಾನೆ

ಅವನ ಗಡ್ಡದಲ್ಲಿ ಚಂದ್ರ-ಹಿಮಸರಳುಗಳು

ಅವನ ಹುಬ್ಬುಗಳಲ್ಲಿ ಚಂದ್ರ-ಮಂಜುಗಡ್ಡೆ

ಅವನ ಮುಖ ಕಣಿಯೇನೂ ಹೇಳಲ್ಲ

ನಂದಿದ ಉರಿಬೆಟ್ಟಗಳ ಲಾವಾ ಚಂದ್ರ ಸಾಗರಗಳನ್ನು ಕರಿಗೊಳಿಸುತ್ತದೆ  

‘ತೋಳ ಚಂದ್ರ’ದ ರಾತ್ರಿಯಂದು ನಾವು ನಮ್ಮ 

ಬದುಕು ಬದಲಾಯಿಸಿಕೊಳ್ಳಬಹುದೆಂದು ಜನರನ್ನುತ್ತಾರೆ 

ಹಿಮಸರಳೊಂದು ನನ್ನ ಕೈಯಲ್ಲಿ ಕರಗುತ್ತದೆ

ಪೂರ್ಣಚಂದ್ರನ ಕಲೆ ಬಹುಶಃ ನನ್ನ 

ಅಂಗೈಯ ಗೆರೆಗಳನ್ನು ಅಳಿಸಬಲ್ಲುದೇನೋ

 

*****

*ಜನವರಿ ತಿಂಗಳ ಮೊದಲ ಹುಣ್ಣಿಮೆಯ ಚಂದ್ರನನ್ನು ‘ವುಲ್ಫ಼್ ಮೂನ್’ ಎಂದು ಕರೆಯುತ್ತಾರೆ; ಕನ್ನಡದಲ್ಲಿ ‘ತೋಳ ಚಂದ್ರ’ ಎಂದು ಅನುವಾದ ಮಾಡಬಹುದು.  ಈ ಪದದ ಮೂಲ ಅಮೇರಿಕದ ಮೂಲ ನಿವಾಸಿ ಇಂಡಿಯನ್ನರಿಂದ ಹಾಗೂ ಮಧ್ಯಕಾಲೀನ ಯೂರೋಪಿಯನ್ನರಿಂದ ಇಳಿದು ಬಂದಿದೆ.  ಸುಮಾರು ಜನವರಿ ಸಮಯದ ಕಡು ಚಳಿಗಾಲದ ರಾತ್ರಿಗಳಲ್ಲಿ ಅಹಾರದ ಅಭಾವದಿಂದ ಒದ್ದಾಡುವ ಹಾಗೂ ಸಂಗಾತಿಗಳಿಗಾಗಿ ಹುಡುಕಾಡುವ ತೋಳಗಳ ಊಳಿಡುವಿಕೆ ಹೆಚ್ಚಾಗುತ್ತಿದ್ದವು. ಚಂದ್ರನ ನೋಡಿ ಊಳಿಡುತ್ತಿದ್ದವು; ಹುಣ್ಣಿಮೆ ಚಂದ್ರನ ಬೆಳಕಿನಿಂದ ತೋಳಗಳಿಗೆ ಕಸಿವಿಸಿಯಾಗುತ್ತಿತ್ತೋ ಏನೋ.  ಇದನ್ನು ಗಮನಿಸಿದ ಆ ಜನರು ಮೊದಲ ಹುಣ್ಣಿಮೆಯ ಚಂದ್ರವನ್ನು ‘ವುಲ್ಫ಼್ ಮೂನ್’ ಎಂದು ಕರೆಯತೊಡಗಿದರು.  




No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...