Monday, February 14, 2022

ನಸುಕು ಆಗಲೇ ಬಿರಿದಿದೆ - HASSO KRULL's 'DAWN HAS ALREADY BROKEN'

ಮೂಲDAWN HAS ALREADY BROKEN

ಕವಿಹಾಸೊ ಕ್ರಲ್ಎಸ್ಟೋನಿಯಾ HASSO KRULL, ESTONIA

Translated from the Estonian by Brandon Lussier

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 


ನಸುಕು ಆಗಲೇ ಬಿರಿದಿದೆ

 

ನಸುಕು ಆಗಲೇ ಬಿರಿದಿದೆ.  ಆಗಲೇ ನಸುಕು ಬಿರಿದಿದೆ.

ಮರಗಳಲ್ಲಿ ರೆಂಬೆಗಳು ಮೂಡುತ್ತವೆ.  ರೆಂಬೆಗಳಲ್ಲಿ ಎಲೆಗಳು ಮೂಡುತ್ತವೆ.

ಲೆಗಳಲ್ಲಿ ಬಣ್ಣ ಮೂಡುತ್ತೆ.  ಬಣ್ಣದಲ್ಲಿ ಛಾಯೆ ಮೂಡುತ್ತೆ.

ಛಾಯೆಯಲ್ಲಿ ಗಾಢತೆ ಮೂಡುತ್ತೆ.  ಗಾಢತೆಯಲ್ಲಿ ನವುರಾಗುತ್ತಾ.

 

ನೆಲದಲ್ಲಿ ಒಂದು ರಗ್ಗು ಉದ್ಭವಿಸುತ್ತದೆ.  ರಗ್ಗಿನ ಮೇಲೆ ಚಪ್ಪಲಿಗಳು ಉದ್ಭವಿಸುತ್ತವೆ. 

ಮೇಜಿನ ಮೇಲೆ ಒಂದು ಗ್ಲಾಸು ಉದ್ಭವಿಸುತ್ತದೆ.  ಗ್ಲಾಸಿನಲ್ಲಿ ನೀರು ಉದ್ಭವಿಸುತ್ತದೆ.  

ಗೋಡೆಯ ಮೇಲೆ ಪರದೆಯೊಂದು ಉದ್ಭವಿಸುತ್ತದೆ.  ಪರದೆಯ ಮೇಲೆ ಒಂದು ಆಕೃತಿ ಉದ್ಭವಿಸುತ್ತದೆ.  

ಶೆಲ್ಫುಗಳಲ್ಲಿ ಪುಸ್ತಕಗಳು ಉದ್ಭಸುತ್ತವೆ.  ಪುಸ್ತಕಗಳಲ್ಲಿ ಪತ್ರಗಳು ಉದ್ಭವಿಸುತ್ತವೆ.

 

ತಲೆದಿಂಬಿನಲ್ಲಿ ಕೂದಲು ಕಾಣಿಸಿಕೊಳ್ಳುತ್ತೆ.  ಕೂದಲಲ್ಲಿ ಮುಖ ಕಾಣಿಸಿಕೊಳ್ಳುತ್ತೆ.  

ಮುಖದಲ್ಲಿ ಕಣ್ಣುಗಳು ಕಾಣಿಸಿಕೊಳ್ಳುತ್ತವೆ.  ಕಣ್ಣುಗಳ ಮೇಲೆ ರೆಪ್ಪೆಗಳು ಕಾಣಿಸಿಕೊಳ್ಳುತ್ತವೆ.  

ರೆಪ್ಪೆಗಳ ಮೇಲೆ ರೆಪ್ಪೆಗೂದಲು ಕಾಣಿಸಿಕೊಳ್ಳುತ್ತವೆ.  ರೆಪ್ಪೆಗೂದಲಗಳ ಮೇಲೆ ಕಂಪನವೊಂದು ಕಾಣಿಸಿಕೊಳ್ಳುತ್ತೆ.  ಕಂಪನದಲ್ಲಿ ಪರದೆಯೊಂದು ಕಾಣಿಸಿಕೊಳ್ಳುತ್ತೆ.  ಪರದೆಯ ಮೇಲೆ ಕನಸುಗಳು ಕಂಡುಬರುತ್ತವೆ.  

 

ಹಿಂಗಣ್ಣಿನ ಪರದೆಯ ಮೇಲೆ ಕನಸುಗಳು ಚಲಿಸುತ್ತವೆ.  

ನೀ ನಿನ್ನ ಮೊಣಕೈಯನ್ನು ಸರಿಸುವೆ.  ನಾ ನಿನ್ನ ಮುಟ್ಟುವೆ.  

ನೀನು ಮಗ್ಗಲು ತಿರುಗುವೆ.  ಕಂಬಳಿಯೊಳಗೆ ಕಾವೇರುತ್ತದೆ.  

ಆ ಕಾವಿನಲ್ಲಿ ಕನಸೊಂದು ಬೀಳುತ್ತೆ.  ಕನಸಿನಲ್ಲಿ ಸೂರ್ಯ ಉದಯಿಸುತ್ತದೆ.

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...