Sunday, February 13, 2022

ಇದೊಂದು ಜೋಗುಳ IDONDU JO:GULA - ULRIKE ALMUT SANDIG's 'A LULLABY FOR ALL THOSE '

ಮೂಲA LULLABY FOR ALL THOSE 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ

ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಇದೊಂದು ಜೋಗುಳ

 

ನಿದ್ದೆಯ ಹೊತ್ತು ನಿದ್ದೆಯನ್ನು ತಡೆಯುವವರೆಲ್ಲರಿಗಾಗಿ ಇದೊಂದು ಜೋಗುಳ.  

ನಿದ್ದೆಯೊಂದಿಗೆ ಕಾದಾಡುವವರೆಲ್ಲರಿಗಾಗಿ ಈ ಜೋಗುಳ, 

ಯಾರಾದರೂ ಹೇಳಿದಾಗ: ದೀಪ ಆರಿಸು, ಮಾತು ನಿಲ್ಲಿಸು, 

ನನ್ನ ದಣಿದ ಗೆಳೆಯರೇ, ಬಾರುಗಳಲ್ಲಿ ಕುರ್ಚಿಗಳನ್ನೆಲ್ಲಾ ಮೇಜುಗಳ ಮೇಲೆ ಜೋಡಿಸಲಾಗಿದೆ, 

ಪೋಸ್ಟರುಗಳು ಬದಲಾಗುತ್ತಿದ್ದಂತೆ ಜಾಹಿರಾತು ಫಲಕಗಳ ಹಮ್‌ಮ್‌ಮ್ಮೆನ್ನುವ ಸದ್ದು, 

ಬ್ಯಾಂಕುಗಳ ಖಾಲಿ ಹಾಲುಗಳನ್ನು ಸೆರೆಹಿಡಿಯುತ್ತಿರುವ ಕ್ಯಾಮರಾಗಳು,

ರಾತ್ರಿಯಂಗಡಿಗಳೆಲ್ಲವೂ ಬೆಳಗುತ್ತಿವೆ, 

ರಾತ್ರಿಬಸ್ಸುಗಳೆಲ್ಲವೂ ಚರ್ಚಿನಂತೆ ಪ್ರಕಾಶಮಾನವಾಗಿರುವ 

ಈ ಶಹರಿನಲ್ಲಿ ಪರ್ರರ್ರೆಂದು ಚಲಿಸುತ್ತಿವೆ.  

 

ನಾವು ಚಿತ್ರಗಳ ಮೂಲಕ ಮಾತಾಡುತ್ತಿದ್ದೇವೆ ಅಷ್ಡೇ, 

 

ಆದರೆ ನಮಗೇನಾದರೂ ಸುಳಿವಿದೆಯೇ ಕತ್ತಲು ಹೇಗೆ ಬರೆಯಲ್ಪಡುತ್ತದೆಂದು?  

ನನ್ನ ದಣಿದ, ನನ್ನ ಇರುಳಾಂಧ ಗೆಳೆಯರೇ, 

ನಾವು ಶುಭವಾರ್ತೆಗಳಿಗಾಗಿ ಕಾಯುತ್ತಿದ್ದೇವೆ, 

ಶುಭವಾರ್ತೆಗಳು ಈ ದಿನಗಳಲ್ಲಿ ವಿರಳವಾಗುತ್ತಿವೆಯಾದರೂ, 

ನಾವು ಕಾಯುತ್ತಿದ್ದೇವೆ ಎರಡು-ಮೂರು ಚೆನ್ನಾದ ಝೇಂಕರಿಸುವ ಕನಸುಗಳಿಗಾಗಿ, 

ನಾಲ್ಕು ಶಾಂತಿ ಒಪ್ಪಂದಗಳಿಗಾಗಿ, 

ಗಾಢ ನಿದ್ರೆಯಲ್ಲಿರುವ ಐದು ಸೇಬುಗಳಿಗಾಗಿ

ನಾವು ಕಾಯುತ್ತಿದ್ದೇವೆ ಆರು ಚರ್ಚುಗಳಿಗಾಗಿ 

ಹಾಗೂ ಏಳು ಕೊಬ್ಬಿದ ಹಸುಗಳಿಗಾಗಿ, 

ಪ್ರಶಾಂತ ನಿದ್ರಾಭರಿತ ಎಂಟು ಗಂಟೆಗಳಿಗಾಗಿ, 

ನಾವು ಕಾಯುತ್ತಿದ್ದೇವೆ ಕಾಣೆಯಾದ ಒಂಬತ್ತು ಗೆಳೆಯರಿಗಾಗಿ.  

ನಾವು ನಮ್ಮ ಬೆರಳುಗಳನ್ನ ಎಣಿಸುತ್ತಿದ್ದೇವೆ.  

ನಾವು ಈಗಲೂ ತಡೆಯುತ್ತಿದ್ದೇವೆ.  ನಾವು ನಿದ್ದೆ ಮಾಡಲ್ಲ.  

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...