Sunday, February 13, 2022

ಅವನ ನಗುವಿನಲ್ಲಿ ನಿನ್ನ ಮುಖ - KRYSTYNA MILOBEDZKA's 'in his laughter your face'

ಮೂಲin his laughter your face 

ಕವಿಕ್ರಿಸ್ಟೀನಾ ಮಿಲೊಬೆಡ್ಜ಼್ಕಪೋಲಂಡ್ 

KRYSTYNA MILOBEDZKA, POLAND

Translated from the Polish by ELŽBIETA WÓJCIK-LEESE 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


 

ಅವನ ನಗುವಿನಲ್ಲಿ ನಿನ್ನ ಮುಖ

 

ಅವನ ನಗುವಿನಲ್ಲಿ ನಿನ್ನ ಮುಖ, ನಿಖರ ನಿಕಟ,

ಮಾರ್ದನಿಸುತ್ತದೆ ಮೆಲುದನಿಯಾಗಿ ಹಿಂದಿರುಗುತ್ತದೆ: ನಿನ್ನ ಮೊಮ್ಮಗ ನಕ್ಕ, ಅಪ್ಪಾ

 

ನನ್ನ ಕಣ್ಗಳಿಂದ ನಿನ್ನ ಕಳಕೊಳ್ಳಲಾರೆ  ನಾ ಕಳೆಯುವೆ

ನಿನ್ನ ಬಗ್ಗೆ ಮಾತಾಡಬೇಕು  ನನ್ನ ದನಿಯೇ ಕೇಳುವೆ

 

ಕಾಲುದಾರಿಯಲ್ಲ ಹಾದಿಯಲ್ಲ

ಕಿರಿದಾದ ಎತ್ತರದಲ್ಲಿ

ಯಾವುದರದೋ ಮೂಲಕ ನಿನ್ನ ಹಿಂದೆಯೇ

ಉದಯಿಸುತ್ತದೆ ಮರು ತಿರುಗುತ್ತದೆ

ಬೂಟು ರೆಂಬೆಯನ್ನು ದಬ್ಬಿದ ಈ ನಿಮಿಷಕ್ಕೆ

 

ಅಲ್ಪಪಾಲಿಗಾಗಿ ಅಷ್ಟೇ

ಕೆಲವು ಉರುಟಾದ ಹೊನ್ನ ಅಕ್ಷರಗಳಿಗಾಗಿ

 

ಅಲ್ಲಿ ಮೇಲೆ ನಮ್ಮ ದಾರಿ

ಅಲ್ಲಿ ಕೆಳಗೆ ನಮ್ಮ ದಾರಿ

ನಡೆಯುತ್ತೇವೆ ನಾವು ಜತೆಗೆ

ಈ ಮಹಾ ಮಲೆಗಳ ಮಾಲೆಗಳ ನಡುವೆ

ಕೆಳಗೆ ಕಲ್ಲು ಚಿಪ್ಪುಗಳು

ನ್ನೂ ಕೆಳಗೆ ಗಿಡಗಳು

 

ಚಿರಾಯತ

ಈ ಶಬ್ಧದ ಸೋಲರಿಯದ ನೀಲಮಣಿ 

 

ನಾವು ಓಡುತ್ತೇವೆ: ಕ್ಷಿಪ್ರವಾಗಿ ಬೀಳುತ್ತೇವೆ ಕಡುಕಪ್ಪು ಎಲೆಯ ದಾರಿಯಾಗಿ

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...