Sunday, July 3, 2022

ಮತ್ತೂ ಮತ್ತೂ ಪ್ರೀತಿ - DEREK WALCOTT'S 'LOVE AFTER LOVE'

ಮೂಲ ಇಂಗ್ಲಿಷ್ ಕವನLOVE AFTER LOVE

ಕವಿಡೆರಿಕ್ ವಾಲ್ಕಾಟ್ಸೆಂಟ್ ಲೂಸಿಯಾ 

(ವೆಸ್ಟ್ ಇಂಡೀಸ್ಕರಿಬಿಯನ್)

DEREK WALCOTT, ST. LUCIA 

(WEST INDIES, THE CARIBBEAN)

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಮತ್ತೂ ಮತ್ತೂ ಪ್ರೀತಿ

 

ಮುಂದೊಂದು ದಿನ ಬರುತ್ತೆ 

ಅಂದು, ಲ್ಲಾಸದಿಂದ,

ನಿನ್ನನ್ನೇ ನೀನು ಸ್ವಾಗತಿಸುವೆ 

ನಿನ್ನದೇ ಬಾಗಿಲಿಗೆ ನೀನು ಬಂದಾಗ, 

ನಿನ್ನದೇ ಕನ್ನಡಿಯಲ್ಲಿ ನಿನ್ನನ್ನು ನೀ ಕಂಡಾಗ, 

 

ನಗುವರು ಈರ್ವರೂ 

ಒಬ್ಬರನ್ನೊಬ್ಬರು ಸ್ವಾಗತಿಸುವಾಗ,

ಹೇಳುವರು, ಬಾ ಕೂರು. ಊಟ ಮಾಡು.

ನೀನು ಮತ್ತೆ ಪ್ರೀತಿಸಲು 

ತೊಡಗುವೆ ಆ ಅಪರಿಚಿತನನ್ನು 

ನಿನ್ನದೇ ತಾನಾಗಿದ್ದವನನ್ನು.

 

ಕುಡಿಯಲು ಕೊಡು.  ಉಣ್ಣಲು ಕೊಡು.  ತಿರುಗಿ ಕೊಡು 

ನಿನ್ನ ಹೃದಯವನ್ನು ತನಗೇ, ಆ ಅಪರಿಚಿತನಿಗೆ 

ನಿನ್ನನ್ನು ನಿನ್ನ ಜೀವಮಾನವೆಲ್ಲಾ ಪ್ರೀತಿಸಿದವನಿಗೆ,

ನೀನು ಬೇರೊಬ್ಬರಿಗಾಗಿ ನಿರ್ಲಕ್ಷಿಸಿದವನಿಗೆ,

ಹೃದಯಾಂತರಾಳದಿಂದ ನಿನ್ನನ್ನು ಅರಿತವನಿಗೆ.

 

ತೆಗಿ ಹೊರಗೆ ಆ ಪುಸ್ತಕದ ಕಪಾಟಿನಿಂದ 

ಪ್ರೇಮಪತ್ರಗಳನ್ನು, ಛಾಯಾಚಿತ್ರಗಳನ್ನು,

ಆ ಹತಾಶೆಭರಿತ ಚೀಟಿಗಳನ್ನು,

 

ಸುಲಿದುಹಾಕು ನಿನ್ನದೇ ಪ್ರತಿಬಿಂಬವನ್ನು ಕನ್ನಡಿಯಿಂದ.

ಕೂತುಕೊ.  ನಿನ್ನ ಜೀವನವ ಸವಿಯುಣ್ಣು.  

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...