ಮೂಲ ಇಂಗ್ಲಿಷ್ ಕವನ: MIDSUMMER, TOBAGO
ಕವಿ: ಡೆರಿಕ್ ವಾಲ್ಕಾಟ್, ಸೆಂಟ್ ಲೂಸಿಯಾ (ವೆಸ್ಟ್ ಇಂಡೀಸ್, ಕರಿಬಿಯನ್)
DEREK WALCOTT, ST. LUCIA (WEST INDIES, THE CARIBBEAN)
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನಡುಬೇಸಗೆ, ಟೊಬ್ಯಾಗೊ*
ಅಗಲವಾದ ಬಿಸಿಲುಬಡಿದ ಕಡಲಕರೆಗಳು.
ಬಿಳಿ ತಾಪ.
ಒಂದು ಹಸಿರು ನದಿ.
ಒಂದು ಸೇತುವೆ,
ಬೇಸಗೆಯ ನಿದ್ರೆಯಲ್ಲಿರುವ ಮನೆಯಂಗಳದಲ್ಲಿ
ಆಗಸ್ಟ್ ತಿಂಗಳೆಲ್ಲಾ ಮಂಪರಿಸುತ್ತಿರುವ
ಕಮರಿದ ಹಳದಿ ತಾಳೆಮರಗಳು.
ನಾನು ಹಿಡಿದಿಟ್ಟುಕೊಂಡಿರುವ ದಿನಗಳು,
ನಾನು ಕಳಕೊಂಡ ದಿನಗಳು,
ನನ್ನ ನೆಲೆನೀಡುವ ಕೈಗಳನ್ನ
ಮೀರಿ, ಪುತ್ರಿಯರಂತೆ, ಬೆಳೆಯುವ ದಿನಗಳು.
*****
*ಟೊಬ್ಯಾಗೊ ಎನ್ನುವುದು ಕರಿಬಿಯನ್/ವೆಸ್ಟ್ ಇಂಡೀಜ಼್-ನಲ್ಲಿರುವ ‘ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೊ’ ಹೆಸರಿನ ದ್ವಿ-ದ್ವೀಪ ರಾಷ್ಟ್ರದ ಒಂದು ದ್ವೀಪ ಭಾಗ.
No comments:
Post a Comment