Saturday, August 27, 2022

ರಾಂಡೋ* - HANS MAGNUS ENZENSBERGER's 'RONDEAU'

ಮೂಲ: RONDEAU 

ಕವಿ: ಹನ್ಸ ಮಾಗ್ನುಸ್ ಎನ್ಸೆನ್ಸಬsಗರ್, ಜರ್ಮನಿ

HANS MAGNUS ENZENSBERGER, GERMANY

Translated from the German by 

MICHAEL HAMBURGER 

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ರಾಂಡೋ*

 

ಮಾತನಾಡುವುದು ಸುಲಭ.

 

ಆದರೆ ಪದಗಳನ್ನು ತಿನ್ನಲಿಕ್ಕಾಗದು.  

ಆದ್ದರಿಂದ ಬ್ರೆಡ್‌ನ್ನು ಮಾಡು.

ಬ್ರೆಡ್ ಮಾಡುವುದು ಕಷ್ಟ. 

ಆದ್ದರಿಂದ ಬೇಕರಿಯವನಾಗು.

 

ಆದರೆ ಬ್ರೆಡ್ಡಿನೊಳಗೆ ಬದುಕಲಾಗದು.

ಆದ್ದರಿಂದ ಮನೆಗಳ ಕಟ್ಟು.

ಮನೆಗಳ ಕಟ್ಟುವುದು ಕಷ್ಟ. 

ಅದ್ದರಿಂದ ಇಟ್ಟಿಗೆಯವನಾಗು.

 

ಆದರೆ ಬೆಟ್ಟದ ಮೇಲೆ ಮನೆಯ ಕಟ್ಟಲಾಗದು.

ಆದ್ದರಿಂದ ಬೆಟ್ಟವ ಸರಿಸು.

ಬೆಟ್ಟಗಳ ಸರಿಸುವುದು ಕಷ್ಟ.

ಆದ್ದರಿಂದ ಪ್ರವಾದಿಯಾಗು.

 

ಆದರೆ ವಿಚಾರಗಳು ಕೇಳಲಿಕ್ಕಾಗದು.

ಆದ್ದರಿಂದ ಮಾತನಾಡು.

ಮಾತನಾಡುವುದು ಕಷ್ಟ.

ಆದ್ದರಿಂದ ನೀನಾರೋ ಅದೇ ನೀನಾಗು

 

ಮತ್ತೆ ನಿನಗೆ ನೀನೇ ಗೊಣಗುಟ್ಟುತ್ತಿರು,

ಕೆಲಸಕ್ಕೆಬಾರದ ಜಂತುವೆ.  

 

* ರಾಂಡೋ (ಗೀತೆ); ಪಲ್ಲವಿ; ಮೊದಲಿನಿಂದ ಕೊನೆಯವರೆಗೆ ಎರಡೇ ಪ್ರಾಸ ಮೇಲಿಂದ ಮೇಲೆ ಬರುವ, ಮೊದಲ ಸಾಲಿನ ಮೊದಲ ಮಾತುಗಳುನಡುವೆಯೊಮ್ಮೆ ಕಡೆಗೊಮ್ಮೆ ಪಲ್ಲವಿಯಾಗಿ ಬರುವ, ಸಾಮಾನ್ಯವಾಗಿ ಹತ್ತು ಯಾ ಹದಿಮೂರು ಸಾಲಿನ, ಭಾವಗೀತೆ. (ಮೈಸೂರು ವಿ.ವಿ. ಪ್ರಕಟಿಸಿದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿರುವ ವಿವರಣೆ) 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...