Wednesday, August 24, 2022

ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ - HEINER MULLER's 'One night during the war a man walked off'

ಮೂಲ: One night during the war a man walked off
ಕವಿ: ಹಾಯ್ನ ಮುಲಾ, ಜರ್ಮನಿ Hei ner Mü ller, Germany
(lived in East Germany before reunification)
Translated by Jam es Rei del
ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್

ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ

ಯುದ್ಧಕಾಲದ ಒಂದು ರಾತ್ರಿ ನಡೆದು ಹೋಗಿಬಿಟ್ಟನೊಬ್ಬ
ಊರಿನ ಕೆರೆಯತ್ತ ಸಾಯಲೆಂದು ಕೊನೆಗೂ,
ಶಾಂತಿಯ ಭಯದಿಂದ. ಹಾಸಿಗೆಯಲ್ಲಿ ಮಲಗಿದ್ದ
ಅವನ ಹೆಂಡತಿ ಎಚ್ಚೆತ್ತು, ಏನೋ ಇಲ್ಲವೆಂಬಂತೆ
ಅನಿಸಿತವಳಿಗೆ: ಅವನಿರಲಿಲ್ಲ.
ಓದಿದಳವಳು: ಅಂತಿಮ ವಿದಾಯ. ಕಾಗದ ಕಂಪಿಸುತಿತ್ತು.
ಓಡಿದಳವಳು, ಅವನು ತನ್ನ ಸಾವನ್ನು ಸೇರುವ ಮುನ್ನ ಅಲ್ಲಿ
ಆ ನೀರಿನಲ್ಲಿ – ನಕ್ಷತ್ರಗಳೇ ಇಲ್ಲದಂತಿತ್ತು ಈ ರಾತ್ರಿ.
ಅವನು ಕಾಣಿಸುತ್ತಿದ್ದ. ನೀರು ಇನ್ನೂ ಸೆಳೆದುಕೊಂಡಿರಲಿಲ್ಲ
ಅವನನ್ನು. ಇಳಿದಳವಳು ನೀರಿನೊಳಗೆ.
ಈಜುತ್ತೀಜುತ್ತಾ, ಹೆಣಗಿದಳವಳು ಹಿಡಿದುಕೊಳ್ಳಲು ಅವನನ್ನು
ಯಾರ ಜತೆ ಎಷ್ಟೊಂದು ರಾತ್ರಿಗಳು ಕೂಡಿದ್ದಳೋ ಅವನನ್ನು
ಅವನು ಮತ್ತೆ ಕೆಳಗೆಳೆದ ಅವಳನ್ನು,
ಅವನ ಸಮಾಧಿಯನ್ನೂ ಹಂಚಿಕೊಳ್ಳಲು.
ಮತ್ತೆ ಅವಳು ನೂಕಿದಳು ಅವನನ್ನು,
ಕ್ಷೀಣಿಸುತ್ತದ್ದ ಅವನು: ಸೇರಿದ ಆಳಕ್ಕೆ ಅವನು.
ಅವಳು ದಡಕ್ಕೆ ಏರಿದಳು: ಅದು ಹಳೆಯ ದಡವಾಗಿರಲಿಲ್ಲ.

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...