Wednesday, August 17, 2022

ಏಯ್ ಪದಗಳೇ - INGEBORG BACHMANN's 'YOU WORDS'

ಇಂಗೆಬೋಗ್ ಬಾಖ್‌ಮಾನ್-ರ ಈ ಕವನ ಓದಿದಾಗ ಕುತೂಹಲವೆನಿಸಿತು. ಒಂದು ತರದ ಮೆಟಾ-ಕವನದ ಹಾಗಿದೆ ಎಂದೆನಿಸಿತು.  ಓದುತ್ತಾ ಹೋದಾಗ ಬೇರೆ ಯಾವುದೋ ಲೋಕಕ್ಕೆ ಕೊಂಡೊಯ್ಯಿತು.  ಯಾವ ರೀತಿಯಲ್ಲಿ ಇನ್ಟರಪ್ರೆಟ್ ಮಾಡಬೇಕೆಂದು ಆರ್ಥವಾಗಲಿಲ್ಲ. ಕೊನೆಗೆ ನನ್ನದೇ ರೀತಿಯಲ್ಲಿ ಅರ್ಥಮಾಡಿಕೊಂಡು ಅನುವಾದ ಮಾಡಿರುವೆ.  ತುಂಬ ಕಷ್ಟವಾಯಿತೆಂದೇ ಹೇಳಬೇಕು.  ಅರ್ಧದಲ್ಲಿ ಬಿಟ್ಟುಬಿಡುವ ಮನಸಾಯಿತು; ಮತ್ತೆ ನೀವೆಲ್ಲಾ ಇದ್ದೀರಲ್ಲ ಎಂಬ ಧೈರ್ಯದಿಂದ ಮುಂದುವರೆದೆ.  ನೊಡಿ, ಹೀಗೆದೆ ಅನುವಾದ, ಹೇಗಿದೇಂತ ಹೇಳಿ   

 

ಮೂಲYOU WORDS

ಕವಿಇಂಗೆಬೋಗ್ ಬಾಖ್ಮಾನ್ಆಸ್ಟ್ರಿಯಾ

INGEBORG BACHMANN (1926-1973), AUSTRIA

Translated from the German 

into English by MARK ANDERSON

ಕನ್ನಡ ಅನುವಾದಎಸ್ ಜಯಶ್ರೀನಿವಾಸ ರಾವ್

 


ಯ್ ಪದಗಳೇ

 

ಎಯ್ ಪದಗಳೇ, ಬನ್ನಿ, ನನ್ನ ಹಿಂದೆ!

ನಾವು ದೂರ, ಬಹು ದೂರ, ಪಯಣಿಸಿದ್ದರೂ, 

ನಾವು ನಡೆಯುತ್ತಲಿರಬೇಕು,

ನಾವು ಕೊನೆಯನ್ನೆಂದೂ ಮುಟ್ಟಲಾರೆವು. 

 

ಕಾಶ ತಿಳಿಯಾಗುತ್ತಿಲ್ಲ.

 

ಪದವೊಂದು

ಮತ್ತಿತರ ಪದಗಳನ್ನು ಮಾತ್ರ 

ತನ್ನ ಹಿಂದೆ ಎಳೆಯಬಲ್ಲುದು,

ವಾಕ್ಯವೊಂದು,

ಮತ್ತೊಂದು ವಾಕ್ಯವನ್ನು.

ಆದ್ದರಿಂದ, ಲೋಕವು ಕೊನೆಗೆ 

ತನ್ನ ಮಧ್ಯೆ ತಾನೇ ಬರಲಿಚ್ಛಿಸುವುದು,

ಹೇಳಲಾಗಿದೆ ಇದನ್ನು ಆಗಲೇ.

ಹೇಳಬೇಡ ಇದನ್ನು.

 

ಪದಗಳೇ, ಬನ್ನಿ ನನ್ನ ಹಿಂದೆ,

ಏಕೆಂದರೆ ಪದಗಳ, ಹೇಳಿಕೆಗಳ, 

ಎದುರುಹೇಳಿಕೆಗಳ ಈ ಹಸಿವು 

- ಇದೇ ಕೊನೆಯಂತಾಗಬಾರದು.

 

ಕೆಲ ಹೊತ್ತಿನವರೆಗೆ

ಇಂದ್ರಿಯಗಳೆಲ್ಲವೂ ಸುಮ್ಮನಿರಲಿ, 

ಹೃದಯದ ಸ್ನಾಯುಗಳು ಬೇರೆ ರೀತಿ ಬಡಿಯಲಿ.

 

ಇರಲಿ ಬಿಡಿ, ಹೇಳುವೆ ನಾನು, ಇರಲಿ ಬಿಡಿ.

ದಾತ್ತ ಕಿವಿಯೊಳಗೆ ಸುರಿಯಲಿಕಲ್ಲ, ಏನೂ ಇಲ್ಲ, 

ಹೇಳುವೆ ನಾನು, ಪಿಸುಮಾತಿನಲ್ಲಿ,

ಸಾವಿನ ಬಗ್ಗೆ ಯಾವ ಅನಿಸಿಕೆಗಳೂ ಇಲ್ಲ,

ರಲಿ ಬಿಡಿ, ಮತ್ತೆ ಬನ್ನಿ ನನ್ನ ಹಿಂದೆ, 

ಮೃದುವಾಗಲ್ಲ, ಕಹಿಯಾಗೂ ಅಲ್ಲ, 

ಸಮಾಧಾನವಿಲ್ಲದ ಸಾಂತ್ವನವಾಗಲ್ಲ,  

ನಿಯುಕ್ತವಾಗಿಸುವಂತದ್ದಲ್ಲ,

ಅಂದರೆ ಚಿಹ್ನೆಗಳಿಲ್ಲದೆಯೂ ಅಲ್ಲ -

 

ಮತ್ತೆ ಎಲ್ಲಕ್ಕಿಂತ ಮೇಲಾಗಿ ಇದಲ್ಲ: 

ಧೂಳಿನ ಜಾಲದಲ್ಲಿರುವ ಪ್ರತಿಮೆ, 

ಅಕ್ಷರಗಳ ಟೊಳ್ಳು ಹೊರಳಾಟ, ಕೊನೆಯ ಮಾತುಗಳು.

 

ಸಾಯುವಾಗಿನ ಮಾತುಗಳಲ್ಲ, ಏಯ್ ಪದಗಳೇ.


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...