Sunday, September 18, 2022

ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ: ರೆಕ್ವಿಯಮ್ ೪ - ANNA AKHMATOVA's 'IF YOU COULD HAVE SEEN, MOCKER: REQUIEM 4'

ಮೂಲ: REQUIEM – Poem 4

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

 

ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ

 

ರೆಕ್ವಿಯಮ್ ೪


ನೀನೇದಾರೂ ನೋಡಿದ್ದರೆ, ಓ ತಮಾಶೆಗಾರ್ತಿಯೇ,

ನಿನ್ನೆಲ್ಲ ಮಿತ್ರ-ಮೈತ್ರಿಣಿಯರ ಪ್ರೀತಿಪಾತ್ರಳೇ,

ಅವರ ಅತಿಪ್ರೀತಿಯಿಂದ ಕೆಟ್ಟುಹೋದವಳೇ, 

ತ್ಸಾರಸ್ಕೊಯೆ ಸೆಲೊ*-ದ ಸಂತುಷ್ಟ ಪಾಪಿಯೇ,

ಏನಾಯಿತು ನಿನ್ನ ಬದುಕು:

ಕೈಯಲ್ಲಿ ಗಂಟು-ಪೊಟ್ಟಣ ಹಿಡಕೊಂಡು, 

ಸಾಲಿನಲ್ಲಿ ಮುನ್ನೂರನೆಯವಳಾಗಿ

ನೀನು ಶಿಲುಬೆಗಳಡಿಯಲ್ಲಿ ನಿಂತಿರುವೆ,

ನಿನ್ನ ಕಣ್ಣೀರು ಕೊರೆಯುವುದು ಕುಳಿಯನ್ನು

ಹೊಸ ವರ್ಷದ ಹಿಮದಲ್ಲಿ – 

ಅಲ್ಲಿ ಜೈಲಿನ ಪಾಪ್ಲರ್ ಮರ 

ಬಾಗುವುದು ತೂಗುವುದು,

ಯಾವ ಸದ್ದೂ ಇಲ್ಲ ಅಲ್ಲಿ – 

ಲ್ಲಿ ಎಷ್ಟೊಂದು ಅಮಾಯಕ ಜೀವಗಳ

ಕೊನೆಯಾಗುತ್ತೋ ಅಲ್ಲಿ ... 

 

*”ತ್ಸಾರ್-ನ ಊರು.”  ಅನಾ ಅಖ್ಮತೊವಾ-ರು ‘ತ್ಸಾರಸ್ಕೊಯೆ ಸೆಲೊ’ ಎಂಬ ಹೆಸರಿನ ಊರಿನಲ್ಲಿ ತಮ್ಮ ಬಾಲ್ಯ-ಯೌವನವನ್ನು ಕಳೆದರು.  ಸೇಂಟ್ ಪೀಟರ್ಸ್‌ಬರ್ಗ್-ನ ಚಿತ್ತಾಕರ್ಷಕ ಉಪನಗರವಾದ ‘ತ್ಸಾರಸ್ಕೊಯೆ ಸೆಲೊ’ ಶ್ರೀಮಂತ ರಾಜಮನೆತನದ ಬೇಸಿಗೆ ನಿವಾಸ ಮತ್ತು ರಷ್ಯಾದ ಶ್ರೀಮಂತರ ಭವ್ಯ ಮಹಲುಗಳ ಊರಾಗಿದೆ.

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...