Monday, November 16, 2020

HUDUKAATA ಹುಡುಕಾಟ - KWESI BREW'S "THE SEARCH"

ಹುಡುಕಾಟ

ಇಂಗ್ಲಿಷ್ ಮೂಲ: The Search

ಕವಿ: ಕ್ವೇಸೀ ಬ್ರೂ, ಘಾನಾ Kwesi Brew (1928-2007), Ghana 

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

*****

ಗತವು ಮತ್ತೇನಲ್ಲ,

ವರ್ತಮಾನದ ಕೆಂಡಗಳು, ಅಷ್ಟೇ;

ಭವಿಷ್ಯತ್ತೋ, ಮೋಡ-ಕಟ್ಟಿದ ಆಕಾಶದೊಳಗೆ

ಮಾಯವಾದ ಹೊಗೆ, ಅಷ್ಟೇ.


ಸೌಮ್ಯ ತೋರು, ಕರುಣೆದೋರು, ಪ್ರಿಯೇ,

ಪದಗಳು ನೆನಪುಗಳಾಗುತ್ತವೆ, 

ನೆನಪುಗಳು ವಿದೂಷಕರ ಆಯುಧಗಳಾಗುತ್ತವೆ.

ತಿಳಿದವರು ಮೌನತಾಳಿದ್ದಾರೆಂದರೆ

ಅವರು ಬುದ್ಧನ ಮುಖದಲ್ಲಿ

ಕ್ರೈಸ್ತನ ಅಂಗೈಗಳನ್ನು ಓದಿದ್ದಾರೆಂದು.


ಎಂದೇ, ಅವರ ಮಾತುಗಳಲ್ಲಿ

ವಿವೇಕ, ಆದರ್ಶಗಳನ್ನು ಅರಸಬೇಡ, ಪ್ರಿಯೇ.

ಅವರ ನಾಲಗೆಗಳನ್ನು ಹದಮಾಡಿ ಮೌನವಾಗಿಸಿದ

ಬೆಂಕಿಯೇ ನಮಗೂ ಕಲಿಸಿಲಿ -- 

ಕಲಿಸು ನಮಗೆ!


ಮಳೆ ಸುರಿಯುತ್ತಿತ್ತು,

ನೀನು ನಾನು ರಾತ್ರಿಯ

ಉತ್ಕಟತೆಯ ಹೊರೆ ಹೊತ್ತು ಮಲಗಿರುವಾಗ;

ಮಿನುಗುವ ಮಿಂಚಿನ ಝಳಪಿನಲಿ

ಅವರ ನವ-ಜ್ಞಾನದ 

ನಿಜ ಗೋಚರಿಸಿತು -

ಅವರು ಮೂರ್ಖರ ಗುಲಾಮರಾಗಿದ್ದರೆಂದು.

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...