ಮೂಲ: Nameless Rain
ಕವಿ: ಸ್ಟಾಟಿಸ್ ಗುರ್‌ಗುರಿಸ್ Stathis Gourgouris, Greece-USA
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್
ಹೆಸರಿಲ್ಲದ ಮಳೆ
ದೇವರ ಹೆಸರು ಮರೆತುಹೋಗಿದೆ
ಯಾಕೆಂದರೆ ಅದನ್ನು ಮೋಡಗಳಲ್ಲಿ
ಬರೆದಿಡುವ ಗೋಜಿಗೆ ಯಾರೂ ಹೋಗಲಿಲ್ಲ.
ಪ್ರತಿ ಸಲವೂ ಮಳೆ ಸುರಿದಾಗ
ಬೀಳುತ್ತದೆ ನಮ್ಮ ಮೇಲೆ
ಹೆಸರಿಲ್ಲದ ದೃಷ್ಟಿಯ
ಅಣುಸೂಕ್ಷ್ಮವಾದ ಪಾಪತೆ.
ಎಂದೇ, ಮನುಷ್ಯರು
ಕಪ್ಪು ಕೊಡೆಗಳನ್ನು ಕಂಡುಹಿಡಿದರು
ಅವರ ದೃಷ್ಟಿಗವಿತ ಹೆಸರನ್ನು
ಜಲಜೋಪಾನವಾಗಿಡಲು.
*****
No comments:
Post a Comment