Sunday, February 14, 2021

ಕವಿಯಾಗಿರುವುದು - KAVIYAGIRUVUDU - JAROSLAV SEIFERT'S "TO BE A POET"

ಮೂಲ: To be a Poet

ಕವಿ: ಯಾರೊಸ್ಲಾವ್ ಸಾಯ್‌ಫ಼್ರತ್ 

Jaroslav Seifert, Czech poet (erstwhile Czechoslovakia)

Translated from the Czech by Ewald Osers  

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಕವಿಯಾಗಿರುವುದು

ಜೀವನ ನನಗೆ ಕಲಿಸಿದ್ದು ಎಷ್ಟೋ ಕಾಲದ ಹಿಂದೆ 

ಅದೇನೆಂದರೆ

ಜೀವನ ನಮಗೆ ಕೊಡಬಲ್ಲ 

ಈ ಭೂಮಿಯಲ್ಲಿನ ಅತೀ ಸುಂದರ ವಸ್ತುಗಳು 

ಸಂಗೀತ ಮತ್ತು ಕಾವ್ಯ.

ಪ್ರೇಮ ಹೊರತುಪಡಿಸಿ, ನಿಸ್ಸಂದೇಹವಾಗಿ.


ಇಂಪೀರಿಯಲ್ ಪಬ್ಲಿಷಿಂಗ್ ಹೌಸ್‌ನವರು

ವ್ರಚ್ಲಿಕಿಯ ಮರಣದ ವರ್ಷ ಪ್ರಕಟಿಸಿದ

ಒಂದು ಹಳೇಯ ಗ್ರಂಥದಲ್ಲಿ

ನಾನು ಕಾವ್ಯಲಕ್ಷಣ ಮತ್ತು ಕಾವ್ಯಾಲಂಕಾರಗಳ 

ಮೇಲಿನ ಅಧ್ಯಾಯಗಳನ್ನು ಓದಿದೆ.


ಆಮೇಲೆ, ನಾನೊಂದು ಗುಲಾಬೀಹೂವನ್ನು ಗಾಜಿನ ಟಂಬ್ಲರಿನಲ್ಲಿ ಇರಿಸಿ,

ಒಂದು ಮೊಂಬತ್ತಿಯನ್ನು ಬೆಳಗಿಸಿ

ನನ್ನ ಮೊದಲ ಪದ್ಯಸಾಲುಗಳನ್ನು ಬರೆಯಲು ತೊಡಗಿದೆ.


ಹೊತ್ತಿ ಉರಿ, ಪದಗಳ ಜ್ವಾಲೆಯೇ,

ಎತ್ತರಕ್ಕೇರು,

ನನ್ನ ಬೆರಳುಗಳು ಸುಟ್ಟರೂ ಸರಿಯೇ!


ಒಂದು ಅಚ್ಚರಿ ಹುಟ್ಟಿಸುವ ರೂಪಕ  

ಬೆರಳಿನ ಉಂಗುರಕ್ಕಿಂತಲೂ ಹೆಚ್ಚು ಮಾನ್ಯವಾದುದ್ದು.

ಆದರೆ, ಪುಚ್‌ಮೇಯರ್‌ನ ಪ್ರಾಸ ನಿಘಂಟು ಕೂಡ

ನನಗೆ ಯಾವ ಉಪಯೋಗಕ್ಕೂ ಬರಲಿಲ್ಲ.


ಬರಿದೇ ವಿಷಯಗಳಿಗಾಗಿ ತಡಕಾಡಿದೆ

ಆ ಮೊದಲ ಮೋಹಕ ಸಾಲನ್ನು ಕೇಳಿಸಿಕೊಳ್ಳಲೆಂದು

ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡೆ.

ಆದರೆ, ಆ ಕತ್ತಲಲ್ಲಿ, ಪದಗಳ ಬದಲಾಗಿ

ಒಂದು ಹೆಣ್ಣಿನ ನಗೆ ಕಂಡೆ, 

ಅವಳ ಗಾಳಿಗರಳಿದ ಕೇಶರಾಶಿಯ ಕಂಡೆ.


ಅದೇ ನನ್ನ ವಿಧಿಯಾಗಿದೆ.

ಮುಗ್ಗರಿಸುತ್ತಲಿರುವೆ ನಾನು ಅದರತ್ತ ಉಸಿರುಕಟ್ಟಿಕೊಂಡು

ನನ್ನ ಜೀವನದುದ್ದಕ್ಕೂ.

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...