Thursday, February 4, 2021

ಒಂದು ಕಡಲ್‌ದೃಶ್ಯದಲ್ಲಿ ಮಿಸ್ಟರ್ ಟಾವ್ - ONDU KADALDRISHYADALLI MISTER TAU - KATERINA ILIOPOULOU'S "MISTER TAU IN A SEASCAPE"

ಮೂಲ: MISTER TAU IN A SEASCAPE

ಕವಿ: ಕ್ಯಾಟರಿನಾ ಇಲಿಯೊಪೌಲೊವ್ KATERINA ILIOPOULOU

Translated from the Greek by A. E. Stallings

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಒಂದು ಕಡಲ್‌ದೃಶ್ಯದಲ್ಲಿ ಮಿಸ್ಟರ್ ಟಾವ್

ಅವನು ಕಡಲತೀರದಲ್ಲಿ ಒಂದು ಬೆನಕವನ್ನು ಹೆಕ್ಕುತ್ತಾನೆ.

ಆ ಬೆನೆಕಕ್ಕೊಂದು ವಿಶಿಷ್ಟ ಗುಣವಿದೆಯೆಂದು ಆತ ಗಮನಿಸುತ್ತಾನೆ,

ಅದೇನೆಂದರೆ ಅದಕ್ಕೆ ಒಳಗೂ ಇಲ್ಲ ಹೊರಗೂ ಇಲ್ಲ,

ಅವೆರಡೂ ಒಂದೇ, ಅದೇ.

ಬೇರೇನೂ ಹೊಳೆಯಲಿಲ್ಲ ಆತನಿಗೆ ಆಗ

ಈ ಬೆನಕ ಜಗದ ವೈರಿಯೆಂದು ತೀರ್ಮಾನಿಸಿ

ದೂರ ಒಗೆದ ಅದನ್ನು.

ಆ ಬೆನಕ ತಾನು ಬಿದ್ದಲ್ಲಿ ಸೃಷ್ಟಿಸುತ್ತದೆ, ಏನಂತೇವೆ, ಒಂದು ’ನೀರ್‌ಗುಂಡಿ’ಯನ್ನು.


ಮಿಸ್ಟರ್ ಟಾವ್‌ಗೆ ಆ ಬೆನಕದ ಕಡೆ ಒಂದು ಅಗಾಧವಾದ ಆಕರ್ಷಣೆ, 

ಒಂದು ಹೇಳಲಸಾಧ್ಯವಾದ ಅಸೊಯೆ ಉಂಟಾಗುತ್ತದೆ.

ಎಂದೇ, ಅವನು ಇನ್ನೊಂದು ಬೆನಕವ ಹೆಕ್ಕಿ ಬಾಯಿಗೆ ಹಾಕಿಕೊಳ್ಳುತ್ತಾನೆ.

ಮೊದಮೊದಲು ಅದು ಉಪ್ಪುಪ್ಪಾಗಿತ್ತು.

ಅದೊಂದು ಕಡಲ ಪದಾರ್ಥವೇ.

ಸ್ವಲ್ಪ ಹೊತ್ತಿನ ನಂತರ ಅದು ಏನೂ ಆಗಿರಲಿಲ್ಲ.

ಅವನ ಸ್ವರವನ್ನು ನುಂಗಿದ

ಮೌನದ ಒಂದು ಗಟ್ಟಿಯಾದ ಗಡ್ಡೆಯಾಗಿತ್ತದು ಅವನ ಬಾಯಿಯೊಳಗೆ

 

ಆಶ್ಚರ್ಯವಾಗುತ್ತದವನಿಗೆ, ಅವನು 

ಸ್ವರವಿಲ್ಲದೇನೇ ಮಾತಾಡಬಲ್ಲನೆಂದು ಅರಿತಾಗ.

ಅವನ ಬೇಡಿಕೆಗಳು ಈಡೇರಿವೆ ಅನ್ನೋದು ತಿಳಿಯಾಗಿದೆ.

ಕಡಲ್‌‍ಹಕ್ಕಿಗಳ ಒಂದು ಹಿಂಡು ಅವನ ಕಾಲ ಬಳಿ ಬಂದಿಳಿಯುತ್ತವೆ. 

ಹಾರಿಹೋದಾಗ, ಅವುಗಳು ಒಂದು ಓದಲಾಗದ ಪಠ್ಯವನ್ನು ಹಿಂಬಿಟ್ಟು ಹೋಗುತ್ತವೆ.

ಮಿಸ್ಟರ್ ಟಾವ್ ಕೆಳಬಗ್ಗಿ ಕೂಡಲೆ ಅದನ್ನು ಪರಿಶೀಲಿಸಲು ತೊಡಗುತ್ತಾನೆ. 

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...