Saturday, March 6, 2021

ಹಳದಿ ಟ್ಯಾಕ್ಸಿ - HALADI TAXI - CHLOE KOUTSOUMBELI'S "YELLOW TAXI"

ಮೂಲ: YELLOW TAXI

ಕವಿ: CHLOE KOUTSOUMBELI, Greek ಕ್ಲೋಯಿ ಕೂತ್ಸುಮ್‌ಬೆಲಿ

Translated from the Greek into English by A. E. Stallings

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಹಳದಿ ಟ್ಯಾಕ್ಸಿ

 

ಇಲ್ಲಸರ್ನೀವು ನನ್ನನ್ನು ಬೇರೆ ಯಾರ ಜತೆಗೋ ಕನ್ಫ಼್ಯೂಸ್ ಮಾಡ್ತಾ ಇದ್ದೀರಾ

ಆ ಹಳದಿ ಟ್ಯಾಕ್ಸಿಯಲ್ಲಿದ್ದದ್ದು 

ನಾನಲ್ಲ

ಅಲ್ಲದೇನಾನೆಂದೂ ಹಿಂದಿನ ಸೀಟಿನಲ್ಲಿ ನಿಮ್ಮ ಜತೆ ಕೂತಿರಲಿಲ್ಲ

ಅಂದು ಹಿಮ ಬೀಳುತ್ತಿರಲಿಲ್ಲನನಗೆ ಅದರ ಖಾತ್ರಿ ಇದೆ,

ಇಲ್ಲಹಿಮಹಲ್ಲೆಗಳು ನನ್ನ ಕೂದಲಲ್ಲಿ ಉದುರಲಿಲ್ಲ

ಪ್ರತಿಯಾಗಿ ಹೇಳಬೇಕೆಂದರೆನನಗೆ ಕೂದಲು ಇರಲಿಲ್ಲ 

ನೀವು ನನ್ನನ್ನು ಚುಂಬಿಸಲಿಲ್ಲಇಲ್ಲದಿದ್ದರೆ ನನಗೆ 

ನೆನಪಿರುತ್ತಿತ್ತು

ಹಾಗೆ ನೀವೇನಾದರೂ ನನ್ನನ್ನು ಚುಂಬಿಸಿದ್ದರೆನಾನು

ಹೇಗೂ ಅಲ್ಲಿರಲಿಲ್ಲ

ಆ ಡ್ರೈವರ್ ಕೂಡ ಒಂದು ಸಲ ಸಹ ತಲೆ ಹಿಂದೆ ತಿರುಗಿಸಲಿಲ್ಲ

ಮಾತಿಲ್ಲದೇನೇ ದಾಟಿದ ಅವನು ಸರೋವರವನ್ನು ಕೊನೇಯ ತನಕ

ಸುತ್ತಲ ಕರೀ ನೀರಿನಲ್ಲಿ

ಆಗಿಂದಾಗ ದೋಣಿಯ ಹುಟ್ಟು ಮುಳುಗುತ್ತಿತ್ತು.

 

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...