ಮೂಲ: Simple Math
ಕವಿ: ಯಾನಿಸ್ ಸ್ಟಿಗಸ್ YANNIS STIGGAS, GREECE
Translated from the Greek by Katerina Angelhaki-Rooke
ಕನ್ನಡಕ್ಕೆ: ಎಸ್ ಜಯಶ್ರಿನಿವಾಸ ರಾವ್
ಸರಳ ಗಣಿತ
ಮೌನದ ನಾಲ್ಕನೇ ಕಿಲೊಮೀಟರ್ ತಲುಪಿದಾಗ
ದೇವರಿಗಾಗಿ ಸೂರ್ಯನಿಗಾಗಿ ಕೂಡಿಸಿಟ್ಟ ಆಣಿಗಳನ್ನು ಕೆಳಚೆಲ್ಲಿದೆ.
ಆಗಿನಿಂದ, ನಾನು ಕಂಕುಳಲ್ಲಿ ಒಂದು ಮಹಾ ಸೊನ್ನೆಯನ್ನು ಹಿಡಿದುಕೊಂಡು ತಿರುಗುತ್ತಿರುವೆ.
ಹೇಳಬೇಕೆಂದರೆ, ಅದೊಂದು ಸಾಧಾರಣ ಸ್ಲೀಪಿಂಗ್-ಬ್ಯಾಗ್
-- ನಿಮಗೆ ಗೊತ್ತಿದೆಯಲ್ಲ, ನೀವು ಒಳಗೆ ತೂರುವಿರಿ,
ಎಂದರೆ ನೀವು ಕನಸಲು ತೊಡಗುವಿರಿ.
ಈಗ ಅದೊಂದು ದೊಡ್ಡ ಬೋರ್ಡಿಂಗ್ ಸ್ಕೂಲು
ಬೇಗನೆ ಮಾನಸಿಕವಾಗಿ ಹೊತ್ತಿಕೊಳ್ಳುವವರಿಗಾಗಿ.
ಸೊನ್ನೆಗೇ ಇಷ್ಟೆಲ್ಲ ನಡೆದಿದೆಯೆಂದ ಮೇಲೆ
ಒಂದಕ್ಕೆ ಏನೇನು ಜರಗಬಹುದೋ ಕಲ್ಪಿಸಿಕೊಳ್ಳಿ.
*****
No comments:
Post a Comment