ಮೂಲ: GOLDEN MOUNTAINS
ಕವಿ: ಟಾಡೆಉಷ್ ರೂಜ಼ಾವೀಚ್ TADEUSZ RÓŻEWICZ, Poland
ಕನ್ನಡಕ್ಕೆ: ಎಸ ಜಯಶ್ರೀನಿವಾಸ ರಾವ
“ಹೊನ್ನ ಮಲೆಗಳು”
ಮೊದಲ ಸಲ
ನಾ ಮಲೆಗಳ ಕಂಡಾಗ
ನನಗಾಗ
ಇಪ್ಪತ್ತಾರು
ಅವುಗಳ ಸಮಕ್ಷದಲ್ಲಿ
ನಾ ನಗಲಿಲ್ಲ
ನಾ ಕಿರುಚಲಿಲ್ಲ
ನಾ ಪಿಸುದನಿಯಲಿ ಮಾತಾಡಿದೆ
ನಾ ಮನೆಗೆ ಮರಳಿದಾಗ
ಹೇಳಬೇಕೆಂದುಕೊಂಡೆ
ಅಮ್ಮನಿಗೆ
ಮಲೆಗಳು ಹೇಗಿರುತ್ತವೆಂದು
ಅದು ಕಷ್ಟದ ಕೆಲಸವಾಗಿತ್ತು
ಕತ್ತಲಲ್ಲಿ
ಎಲ್ಲವೂ ಬೇರೆಯಾಗಿ ಕಾಣುತ್ತವೆ
ಮಲೆಗಳೂ, ಪದಗಳೂ
ಅಮ್ಮ ಸುಮ್ಮನಿದ್ದಳು
ಆಯಾಸವಾಗಿರಬೇಕು
ನಿದ್ದೆ ಹೋದಳು
ಆ ಚಂದ್ರ,
ಬಡವರ
ಹೊನ್ನ ಮಲೆ,
ಮೋಡಗಳಲ್ಲಿ ಹಿಗ್ಗುತ್ತಿತ್ತು
No comments:
Post a Comment