Friday, May 21, 2021

ಸುರಿದವು ನಕ್ಷತ್ರಗಳು SURIDAVU NAKSHATRAGALU - JULIA HARTWIG'S 'IT POURED STARS'

ಮೂಲIT POURED STARS

ಕವಿಯುಲಿಯಾ ಹಾರ್ತ್‌ವಿಗ್  JULIA HARTWIG, Poland

Translated from the Polish into English by JOHN & BOGDANA CARPENTER

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಸುರಿದವು ನಕ್ಷತ್ರಗಳು

 

ಆ ಆಗಸ್ಟ್ ತಿಂಗಳಲಿ ಗಾಜಿನ ಚೂರುಗಳಂತೆ ಸುರಿದವು ನಕ್ಷತ್ರಗಳು

ನಾವು ಏನನ್ನೂ ಕೋರಲಿಲ್ಲ

ಆದರೆ ಪ್ರತಿ ನಕ್ಷತ್ರವೂ ನೆನಪುಗಳನು ಹೊತ್ತಿಸಿತು

ಛಾಯಾಚಿತ್ರಕ್ಕೆ ಪ್ರಕಾಶವೀಯ್ಯುವ 

ಮೆಗ್ನೀಸಿಯಂನ ಸ್ಫೋಟದಂತೆ

 

ಕತ್ತಲಲಿ ಅವಿತುಕೊಂಡು ತಲೆಯೆತ್ತಿ ನೋಡಿದಾಗ

ಅವನ ಆಕಾಶಗಳಲಿ ಮನೆ ಕಂಡ

ಭೂದೃಶ್ಯಗಳನು ಗುರುತಿಸುತ್ತಾನೆ ಮನುಷ್ಯ

ಅವನ ಕಣ್ಣುಗಳು ಮಾತ್ರ ಸಂವಾದಿಸುತ್ತವೆ

ತುಲಾರಾಶಿಯ ಬೆಳಕ ಚುಕ್ಕೆಗಳ ಜತೆ

ದೊಡ್ಡ ಚಿಕ್ಕ ಸಪ್ತರ್ಷಿ ಮಂಡಲಗಳ ಜತೆ 

ಸ್ವಾತಿ ನಕ್ಷತ್ರ ಗುಲಾಬಿ ಬೆಳಕ ಹೊಳಪಿಸುತ್ತಿದೆ

ಧ್ರುವತಾರೆ – ನಮ್ಮ ಪಥದರ್ಶಿ – 

ಅದನ್ನು ಗಂಭೀರ ನೋಟದಿಂದ ಅಳೆಯುತ್ತದೆ

 

ತಲೆಮಾರುಗಳು ಅನುಭವಿಸಿದ ಮೌನದಲಿ

ಚಿಂತನೆ ಮೂಕವಾಗುತ್ತದೆ

ಅನಂತದ ನಾಕ್ಷತ್ರಿಕ ಜಾಲದಲ್ಲಿ ಅಚಾನಕ್ಕಾಗಿ ಸಿಕ್ಕಿಬಿದ್ದ ಹಾಗೆ

ನಿಸ್ಸಹಾಯಕ, ಕರುಣಾಜನಕ

ಏಕಕಾಲಕ್ಕೆ

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...