Sunday, May 16, 2021

ಸುಟ್ಟ ಕಾಗದದ ಚೂರುಗಳು - SUTTA KAGADADA CHOORUGALU - RYSZARD KRYNICKI'S 'SCRAPS OF BURNT PAPER'

ಮೂಲ: SCRAPS OF BURNT PAPER 

ಕವಿರಿಶಾರ್ಡ ಕ್ರಿನಿತ್‌ಸ್ಕಿ RYSZARD KRYNICKI, Poland 

Translated from the Polish into English by ALYSSA VALLES

ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಸುಟ್ಟ ಕಾಗದದ ಚೂರುಗಳು

 

ಸುಟ್ಟ ಕಾಗದದ ಆಕಾಶಕಾಯಗಳು

ರಸ್ತೆಯಲ್ಲಿ ಬೀಳುತ್ತಲಿವೆ:

 

ಕೆಲವೇ ವರ್ಷಗಳ ಅಥವಾ ಕೆಲವು ಸಾವಿರ ವರ್ಷಗಳ ಹಿಂದೆ

ನೀವು ಯೋಚಿಸಿರಬಹುದು

ಸ್ವರ್ಗವೂ ಕೂಡ ಸ್ಥಳದ ಅಭಾವದಿಂದ ಒದ್ದಾಡುತ್ತಿದೆ

ಹಾಗೆಯೇ, ಅದು ಆಗಿಂದಾಗ,

ಈ ಭೂಮಿಯಲ್ಲಿ ಆದಿಯಿಂದ ನಡೆದಾಡಿದ 

ಪ್ರತಿಯೊಬ್ಬರ ಪ್ರತಿಯೊಂದು ಕೃತ್ಯವನ್ನು 

ದಾಖಲಿಸಿರುವ ಕಡತಗಳನ್ನು

ಸುಡುತ್ತದೆ;

 

ಈಗ ನಿಮಗನಿಸುವುದನ್ನು

ನೀವು ಹಣೆಬರಹವೆಂದೋ ಅಥವಾ

ನಂಬಿಕೆಯ ಅಭಾವವೆಂದೋ ಕರೆಯಲಾಗದು.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...