Monday, June 14, 2021

ಮುಂದುವರಿಕೆ - MUNDUVARIKE - PIOTR SOMMER'S 'CONTINUED'

ಮೂಲCONTINUED 

ಕವಿಪ್ಯೋತ್ರ್ ಸಾಮರ್  PIOTR SOMMER, Poland

Translated from the Polish into English by Halina Janod and Michael Kasper 


ಕನ್ನಡಕ್ಕೆಸ್ ಜಯಶ್ರೀನಿವಾಸ ರಾವ್

 

ಮುಂದುವರಿಕೆ

 

ಹಿಂದೆ ಇದ್ದ ಹಾಗೆಯೇ ಇರುವುದಿಲ್ಲ ಯಾವುದೂ,

ಪರಿಚಿತ ವಸ್ತುವಿಷಯಗಳ ಆಸ್ವಾದನೆ ಕೂಡ

ಇರುವುದಿಲ್ಲ ಹಿಂದಿದ್ದಂತೆ. 

ನಮ್ಮ ವಿಷಾದಗಳು ಒಂದಕ್ಕೊಂದು ಭಿನ್ನವಾಗಿರುತ್ತವೆ, 

ಹಾಗೂ ನಾವು

ನಮ್ಮ ಆತಂಕಗಳಲಿ ಒಬ್ಬರಿಂದೊಬ್ಬರು ಭಿನ್ನವಾಗಿರುತ್ತೇವೆ.

 

ಹಿಂದೆ ಇದ್ದ ಹಾಗೇಯೇ ಇರುವುದಿಲ್ಲ ಯಾವುದೂ,

ಯಾವುದೊಂದೂ ಕೂಡ. 

ಸರಳ ಯೋಚನೆಗಳು ಭಿನ್ನವಾಗಿ, ಹೊಸದಾಗಿ ಕೇಳ್ಪಡುತ್ತವೆ, 

ಏಕೆಂದರೆ ಅವುಗಳು 

ಇನ್ನೂ ಸರಳವಾಗಿ, ಇನ್ನೂ ಹೊಸದಾಗಿ ಹೇಳಲ್ಪಡುತ್ತವೆ.

ಹೃದಯಕ್ಕೆ ತೆರೆದುಕೊಳ್ಳುವುದು ಹೇಗೆಂದು ತಿಳಿದಿರುತ್ತೆ,

ಮತ್ತೆ, ಪ್ರೇಮ ಪ್ರೇಮವಾಗಿ ಉಳಿದಿರುವುದಿಲ್ಲ.

ಎಲ್ಲವೂ ಬದಲಾಗುತ್ತವೆ.

 

ಹಿಂದೆ ಇದ್ದ ಹಾಗೇಯೇ ಇರುವುದಿಲ್ಲ ಯಾವುದೂ,

ಅವೂ ಕೂಡ ಹೇಗೋ ಹೊಸದಾಗಿರುತ್ತವೆ, ಏಕೆಂದರೆ ಹೇಗಿದ್ದರೂ,

ಹಿಂದೆ, ವಸ್ತುವಿಷಯಗಳು ಒಂದೇ ತರಹದ್ದಾಗಿದ್ದಿರಬಹುದು: ಬೆಳಗ್ಗೆ,

ಮತ್ತುಳಿದ ದಿನ, ಸಂಜೆ, ರಾತ್ರಿ, ಆದರೆ ಈಗಲ್ಲ.

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...