Wednesday, September 15, 2021

ಏನಾಗುವುದು ಆಗ E:NAGUVUDU AAGA - ZBIGNIEW HERBERT'S "WHAT WILL HAPPEN"

ಕವಿಜ಼್ಬಿಗ್ನಿಎಫ಼್ ಹೆರ್ಬೆರ್ತ್ ZBIGNIEW HERBERT, Poland 

ಮೂಲ: WHAT WILL HAPPEN

Translated from the original Polish by Alissa Valles 

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್

 

ನಾಗುವುದು ಆಗ

 

ನಾಗುವುದು ಆಗ

ಕವನಗಳಿಂದ ಕೈಗಳು

ಕಳಚಿ ಬಿದ್ದಾಗ

 

ಅನ್ಯ ಬೆಟ್ಟಗಳಲ್ಲಿ

ನಾನು ಒಣ ನೀರನ್ನು ಕುಡಿವಾಗ

 

ಗಣನೀಯವಾಗಬೇಕಿಲ್ಲ ಇದು

ಆದರೆ ಆಗುತ್ತೆ

 

ಕವನಗಳು ಏನಾಗುತ್ತವೆ

ಉಸಿರು ತೆರಳಿದಾಗ

ನುಡಿಯ ಘನತೆ ತಿರಸ್ಕೃತವಾದಾಗ

 

ಕಣಿವೆಯೊಳಗೆ 

ಕರಾಳ ಕಾಡಿನಂಚಿನಲಿ

ಹೊಸ ಹಾಸ

ಮೊಳಗುತ್ತದೆ

ನಾನು ಮೇಜನ್ನು ಬಿಟ್ಟು

ಕಣಿವೆಯೊಳಗೆ ಇಳಿವೆನಾ?

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...