Wednesday, September 22, 2021

ಮೂರನೇ ದೆಸೆ MOORANE DESE - PIOTR SOMMER'S 'THIRD STATE'

ಮೂಲTHIRD STATE

ಕವಿಪ್ಯೋತ್ರ್ ಸಾಮರ್ಪೋಲಂಡ್ – PIOTR SOMMER, Poland

Translated from the Polish into English by HALINA JANOD, MICHAEL KASPER, and W. MARTIN


ಕನ್ನಡ ಅನುವಾದಸ್. ಜಯಶ್ರೀನಿವಾಸ ರಾವ್

 

ಮೂರನೇ ದೆಸೆ

 

ದ್ದಕ್ಕಿದ್ದಂತೆ, ನಾನು ನಸುಕನ್ನು ನೆನೆದೆನು,

ಹೆಚ್ಚುಕಮ್ಮಿ ಬಾಲ್ಯಕಾಲದಲ್ಲಿದ್ದಂತೆ ಅನಿಸಿತು – 

ಆತ್ಮವು ದೇಹದಿಂದ ತನ್ನನ್ನು ಹರಿದುಕೊಂಡಿತು,

ನೋಡಿತು ಎತ್ತರದಿಂದ ಅದರೊಳಗೆ ನೇರವಾಗಿ,

 

ನಿರ್ಲಿಪ್ತವಾಗಿದೆ ಈಗ ಎಂದೆಂದಿಗೂ

ತನ್ನ ತೆರವಾದ ವಿಕಟ ಕಾಯದೊಂದಿಗೆ

ನೆಲದಿಂದೇರಲೂ ಕೂಡ ಕೂಡದ ಕಾಯದೊಂದಿಗೆ.

ನೋಡಿತದು ದೇಹವನ್ನು, ಆದರೆ ಗೊತ್ತಿರಲಿಲ್ಲ ಅದಕೆ

 

ಅದು ನಿಜಕ್ಕೂ ಎಷ್ಟು ಅಸಡ್ಡಾಳವಾಗಿದೆಯೆಂದು,

ಚಿರಂತನವಾಗಿ ರೆಕ್ಕೆರಹಿತ.

ನಾನು ಸ್ವತಃ ಬದಿಗೆ ಸರಿದು ನಿಂತಿದ್ದೆ ಅನಿಸುತ್ತೆ

ಏಕೆಂದರೆ ನಾನು ಇಬ್ಬರನ್ನೂ ನೋಡಿದೆ

 

ಮುಂಜಾವಿನ ಅರೆಬೆಳಕಿನಲ್ಲಿ, ಆಶ್ಚರ್ಯವೆಂಬಂತೆ ಸ್ಪಷ್ಟವಾಗಿ,

ಇದು ಶರತ್ಕಾಲವಲ್ಲ ಎಂಬಂತೆ,

ಮಂಜು ಯಾ ಕಟ್ಟಡಗಳು ಯಾವುದೂ ಅಡ್ಡ ಬರದೇ.

ಮತ್ತೆ ನಾನು ಅವರಿಬ್ಬರ ಮಧ್ಯದಲ್ಲಿದ್ದೆ

 

ಮೂರನೇಯದಾಗಿ, ಒಂದು ಒಂಟಿ ಮೆಟ್ಟಿನ ಹಾಗೆ,

ಎಲ್ಲಿ ಅಂತ ಖಚಿತವಾಗಿ ಗೊತ್ತಿಲ್ಲ ನನಗೆ,

ಬದಿಯಲ್ಲಿದ್ದೇನೆ, ಆದರೆ ಹತ್ತಿರದಲ್ಲೇ,

ಅಡಗಿಕೊಂಡಿದ್ದೇನೆ ಈಗ ಆತ್ಮದ ಗೊಂದಿಯಲ್ಲಿ,

 

ತೇಲುತಿದೆ ಹಗುರವಾಗಿ ಆಕಾಶದಲ್ಲಿ, ಅದರ 

ದೈಹಿಕ ಚಿಪ್ಪಿನೊಳಗೆ ಈಗ, ನೋಡುತಿದೆ

ಮೇಲಕೆ ನಿಷ್ಕಪಟ ಮರುಗಿನಿಂದ.  ಆಗ ಆಕಾಶದಲ್ಲಿ

ಹಿಮದ ಹೊದಿಕೆಯೊಂದು ಬಡಿದಾಡಿತು

 

ಜೂಲುಜೂಲಾಗಿ, ತೂತು ತೂತಾಗಿ,

ಕೆಳಗೆ ಜನರ ಮುಖಗಳು ಕೂಡ ಬಿಳಿಯಾಗಿದ್ದವು,

ನಾನು ಅಲೆಯಲೆಯಾಗಿ ಕೆಳಗಿಳಿದೆ, ಕೂಡಿಬಿಟ್ಟೆ,

ನಗರದೊಳಗೆ ತೊಯ್ದುಬಿಟ್ಟೆ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...