Wednesday, September 22, 2021

ಕನ್ನಡಿಯಲ್ಲಿ ಕಾಣುವ ತಲೆ KANNADIYALLI KAANUVA TALE - JULIAN KORNHAUSER'S 'HEAD IN A MIRROR'

ಮೂಲHEAD IN A MIRROR

ಕವಿಯೂಲ್ಯನ್ ಕೋನ್ಹಾವ್ಸ(ರ್), ಪೋಲಂಡ್ JULIAN KORNHAUSER, POLAND

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಕನ್ನಡಿಯಲ್ಲಿ ಕಾಣುವ ತಲೆ

 

ನೋಡುತ್ತೆ ನನ್ನತ್ತ

ಕಪ್ಪಿಟ್ಟ ಕಣ್ಣುಗಳಿಂದ

ಸೀಸದ ಗೋಲದಂತೆ ನಿಶ್ಚಲ

 

ಅದರ ದಪ್ಪ ತೊಗಲಚೀಲದೊಳಗೆ

ನೆನಪೊಂದು ನೊರೆಗಟ್ಟುತ್ತಿದೆ

ಮೂಲಗಳನ್ನರಸುತ್ತಿದೆ

 

ಹಣೆಯಮೇಲಿನ ಸುಕ್ಕೊಂದು

ಒಡೆಯುತ್ತೆ ಗಾಯದಂತೆ

ಕಾಡು ಚಿಗುರುಗಳು

ಮೊಳೆಯುತ್ತವೆ ಅಲ್ಲಿಂದ

 

ಅದರ ಒಂದು ಬದಿ ಬೆಳಗಿದೆ

ಅದು ಶೂನ್ಯದಲ್ಲಿ ಹಾರಾಡುತ್ತಿದೆ

 

ಅದು ತುಟಿಗಳನ್ನ ಚಲಿಸುತ್ತಿಲ್ಲ 

ಅದರ ಸ್ತಬ್ಧತೆಯಲ್ಲಿ

ಅದರ ಭೀಕರತೆ ಕಾಣುತ್ತೆ

 

ಯಾಕದು ಮೌನವಾಗಿದೆ,

ಗೋಡೆಗೆ ಆತುಕೊಂಡು?

 

ಅದರ ನಿರ್ಭಾವ ಮುಖದಲ್ಲಿ

ನೆನಪುಗಳ ಪ್ರತಿಬಿಂಬಗಳು

 

 

ದೇಹದಿಂದ ಹರಿದುಕೊಂಡು

ಮಲಗುತ್ತೆ ಅದು ನೀಲಕ ಪೊದೆ ರಾತ್ರಿಯಲ್ಲಿರುವಂತೆ

 

ನನ್ನನ್ನು ಕೀಳಾಗಿ ನೋಡುತ್ತೆ ಅದು

ಸಂಪೂರ್ಣ ಶಸ್ತ್ರಸನ್ನದ್ಧವಾಗಿ

ತಾಳ್ಮೆಯಿಂದ

 

*****


HEAD IN A MIRROR

Looks at me
with blackened eyes
motionless as a lead ball

in its heavy wine skin
a memory foams
seeking roots

furrow on its forehead
opens up like a wound
from which wild sprouts
come out

side-lit
it hovers in the void

doesn’t move its lips
it’s menacing
in its transfixion

why is it speechless
leaning against the wall

in its stony countenance
memories are reflected

torn from the body
it sleeps like a lilac bush at night

it looks down on me
armed to its teeth
with patience

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...