Wednesday, September 22, 2021

ತಾರೆಗಳು ನೆಚ್ಚಿದವರು TAAREGALU NECHCHIDAVARU - ZBIGNIEW HERBERT'S 'THE STARS' CHOSEN ONES'

ಮೂಲ: THE STARS’ CHOSEN ONES

ಕವಿಜ಼್ಬಿಗ್ನಿಎಫ಼್ ಹೆರ್ಬೆರ್ತ್ ZBIGNIEW HERBERT, POLAND 

Translated from the original Polish by Alissa Valles 

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್

 

ತಾರೆಗಳು ನೆಚ್ಚಿದವರು

 

ಅದೊಬ್ಬ ಕವಿ

ಅಂವ ಏಂಜಲ್ ಅಲ್ಲ

 

ರೆಕ್ಕೆಗಳಿಲ್ಲ ಅವನಿಗೆ

ಗರಿಚಿಗುರಿದ ಬಲಗೈ 

ಮಾತ್ರ

 

ಆ ಕೈ ಗಾಳಿಯ ಬಡಿಯುತ್ತೆ

ಅವನು ಮೂರಡಿ ಹಾರುತ್ತಾನೆ ಮೇಲಕ್ಕೆ 

ಮತ್ತೆ ತಿರುಗಿ ಬೀಳುತ್ತಾನೆ ಕೆಳಕ್ಕೆ 

 

ಅವನು ಪೂರ್ಣ ಕೆಳ ಬಿದ್ದ ಮೇಲೆ

ಪಾದಗಳಿಂದ ನೆಲವ ಒದ್ದು

ತೇಲುತ್ತಾನೆ ಮೇಲೆ ಒಂದು ಗಳಿಗೆ

ಗರಿಚಿಗುರಿದ ಕೈಯನ್ನು ಪಟಪಟಿಸುತ್ತಾ

 

ಆಹಾ, ಅವನು ಮಾತ್ರ ಮಣ್ಣಿನ ಆಕರ್ಷಣೆಯನ್ನು ತಡೆಯಬಲ್ಲನಾದರೆ

ಅವನು ತಾರೆಗಳ ಬೀಡೊಂದರಲ್ಲಿ ಮನೆ ಮಾಡಿಯಾನು

ಅವನು ಕಿರಣದಿಂದ ಕಿರಣಕ್ಕೆ ನಾಗಾಲೋಟಗೈದಾನು

ಅವನು ...

 

ಆದರೆ ತಾರೆಗಳು

ತಾವೆಲ್ಲಿ ಅವನ ಭುವಿಯಾಗುವೆವೋ

ಎಂಬ ಆಲೋಚನೆ ಮಾತ್ರದಲ್ಲೇ

ಬೆದರಿ ಬಿದ್ದವು

 

ತನ್ನ ಗರಿಚಿಗುರಿದ ಕೈಯಿಂದ ಕವಿ

ತನ್ನ ಕಣ್ಣುಗಳನ್ನು ಮಾಚಿಕೊಳ್ಳುತ್ತಾನೆ

ಹಾರಾಟದ ಕನಸು ಕಾಣುತ್ತಿಲ್ಲ ಈಗ ಅವನು

ಕಾಣುತ್ತಾನೆ ಅನಂತದ ನೆರಳ್‌ಚಿತ್ರದಲ್ಲಿ 

ಮಿಂಚಿನ ಝಳಪಿನಂತೆ ಗೆರೆಗೀರಿದ

ಪತನದ ಕನಸು 

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...