ಮೂಲ: BUT MAYBE
ಕವಿ: ಎರಿಕ್ ಫ಼್ರೀಡ್, ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಕವಿ
ERICH FRIED, German language poet of AUSTRIA
Translated from the German into English by STUART HOOD
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಅದರೆ ಹೀಗೂ ಸಾಧ್ಯ
ನನ್ನ ಮಹಾ ಪದಗಳು
ನನ್ನನ್ನು ಸಾವಿನಿಂದ ರಕ್ಷಿಸೊಲ್ಲ
ನನ್ನ ಅಲ್ಪ ಪದಗಳೂ
ನನ್ನನ್ನು ಸಾವಿನಿಂದ ರಕ್ಷಿಸೊಲ್ಲ
ಯಾವುದೇ ತರಹದ ಪದವಾಗಲಿ
ಅಥವಾ ಮಹಾ ಮತ್ತು ಅಲ್ಪ ಪದಗಳ
ನಡುವಿನ ಮೌನವಾಗಲಿ
ನನ್ನನ್ನು ಸಾವಿನಿಂದ ರಕ್ಷಿಸೊಲ್ಲ
ಆದರೆ ಹೀಗೂ ಸಾಧ್ಯ –
ಈ ಪದಗಳಲ್ಲಿ
ಕೆಲ ಪದಗಳು,
ಮತ್ತೆ ಹೀಗೂ ಸಾಧ್ಯ -
ಆ ಅಲ್ಪ ಪದಗಳು ವಿಶೇಷವಾಗಿ,
ಯಾ ಪದಗಳ ನಡುವಿನ ಮೌನ ಮಾತ್ರ
ಕೆಲವೇ ಮಂದಿಯನ್ನು ಸಾವಿನಿಂದ ರಕ್ಷಿಸುವುದು
ನಾನು ಇಲ್ಲದಾಗ
No comments:
Post a Comment