ಮೂಲ: STILL POOL
ಕವಿ: ಮೈಕಲ್ ಕ್ರೂಗರ್, ಜರ್ಮನಿ MICHAEL KRÜGER, GERMANY
Translated from the German by Joseph Given
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನಿಶ್ಚಲ ಕೊಳ
ನಿಶ್ಚಲ ಕೊಳವೊಂದು
ಅಡವಿಯಲ್ಲಿ,
ಆಗೊಮ್ಮೆ ಈಗೊಮ್ಮೆ
ಕೀಟಗಳಿಂದ ಸ್ಪರ್ಶಿಸಲ್ಪಡುತ್ತದೆ.
ಗಾಳಿಯ ನೆಗೆತದ
ಕರೆಗೆ ಕಿವಿಗೊಡದ
ಎಲೆ ಬೀಜಗಳ ದಟ್ಟ ಪದರು.
ರಾತ್ರಿಯಲಿ, ದೊಡ್ಡ ಮೃಗಗಳು
ಇಲ್ಲಿ ನೀರು ಕುಡಿಯುತ್ತಾವೆ,
ಆದರೆ ರಾತ್ರಿಯಲಿ ಮಾತ್ರ;
‘ನಿಶ್ಚಲ ಕೊಳ’ ಕ್ಕೆ
ಇನ್ನೊಂದು ಪದ ಹುಡುಕುವ
ಬಗ್ಗೆ ನಮಗೆ
ಮುಜುಗರವಾಗಬಾರದೆಂಬ
ಕಾರಣಕ್ಕಾಗಿ, ಅಷ್ಟೇ.
No comments:
Post a Comment