Wednesday, November 10, 2021

ನಿನ್ನ ಹೆಸರನ್ನು ನಾನು ಮನದಿಂದ ತೆಗೆದೆ HUMBERTO AK’ABAL'S "I TOOK YOUR NAME OUT OF MY MIND"

ಮೂಲ: I TOOK YOUR NAME OUT OF MY MIND

ಕವಿ: HUMBERTO AK’ABAL, GUATEMALA ಉಂಬೆರ್ತೋ ಅಖ್ಅಬಾಲ್ಗ್ವಾಟೆಮಾಲಾ

 

Humberto Ak’Abal is a K’iche Mayan poet from Guatemala.  He wrote in his native K’iche language and then his poetry was translated into Spanish.  From Spanish to English and from English to Kannada ... quite a journey!!

 

Translated from the Spanish into English by Ilan Stavans

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್


 

ನಿನ್ನ ಹೆಸರನ್ನು ನಾನು ಮನದಿಂದ ತೆಗೆದೆ

 

ನಿನ್ನ ಹೆಸರನ್ನು ನಾನು ಮನದಿಂದ ತೆಗೆದೆ 

ಬೆಟ್ಟದಲ್ಲೆಲ್ಲೋ ಅದನ್ನು ಕಳೆದೆ.

 

ಗಾಳಿ ಅದನ್ನು ಎತ್ತಿ ಕೊಂಡಿತು

ಕಣಿವೆಯಲಿ ಅದು 

ತನ್ನ ದಾರಿ ಕಂಡಿತು.

 

ನಾನದ ಮರೆಯಲು ತೊಡಗಿದೆ.

 

ಇದ್ದಕ್ಕಿದ್ದಂತೆ

ಅಪ್ಪಳಿಸಿತು ಅದು ಕಡಿಬಂಡೆಗಳ ಮುಖಕೆ

ಮತ್ತೆ ತಿರುಗಿ ನೆಗೆಯಿತು ಅದು:

 

ಮಳೆಯು ಅದನ್ನು ಹಾಡಿಸಿತು

ನಿನ್ನ ಹೆಸರು ನನ್ನ ಸೇರಿತು 

ನಾನಳುತ್ತಿರುವಾಗ.

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...