Friday, November 26, 2021

ಕಿವಿ KIVI - ULRIKE ALMUT SANDIG'S "EAR"

ಮೂಲ: EAR 

ಕವಿ: ಉಲ್ರೀಕ ಆಲ್ಮತ ಜ಼ಂಡಿಷ್, ಜರ್ಮನಿ ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಕಿವಿ

 

ದೆವ್ವಗಳು ನೆನಪಿಸಿಕೊಳ್ಳುತ್ತಾವೆಯೇ?  ಯಾವುವು ನೆನಪಿಸಿಕೊಳ್ಳುತ್ತಾವೆ?

ಯಾವುವು ನೆನಪಿಸಿಕೊಳ್ಳಲ್ಲ?  ಹಾಗೆ, ನೆನಪಿಸಿಕೊಳ್ಳುವುದಾದರೆ, ಯಾವ ಅಂಗ

 

ಬಳಸಬಹುದು? ಮೆದುಳೋ, ಮೂಳೆಗಳೋ, ಕಣ್ಣುಗಳು ಇರಬಹುದೇ, 

ಅಥವಾ, ಎಲ್ಲಾ ಅಂದ ಮೇಲೆ, ಬಹುಶಃ ಕಿವಿಯೆನೋ? 

 

ಹಿತ್ತಲಿನ ಹಿಂದೆ ಎತ್ತರದ ಹುಲ್ಲಿನ ಕಾಡನ್ನು ಅವು ನೆನೆದುಕೊಳ್ಳುತ್ತಾವೆಯೇ?  

ಹೇಗೆ ಮುಳ್ಳುಗಳು ತುರಿದವು ಗುಲಾಬಿಗಳು ಬೆಳೆದಂತೆ,

 

ಹೇಗೆ ಪೇರಳೆ ಮರ ಕೀರಿತು, ಹೇಗೆ ಮೆಗ್ನೋಲಿಯಾ ಗಿಡ ಹಾಡಿತು, 

ಅದರ ಪ್ರತಿ ಗೆಲ್ಲಿನಲಿ ನೀರ್‌ಗಾಲಿಯಂತಿರುವ ಕುಸುಮಗಲೋಳಗೆ 

 

ಬ್ಲೂಬಾಟಲ್‌ ನೊಣಗಳು ಸಾಲುಗಳು, ಹೇಗೆ  ಏರೋಪ್ಲೇನುಗಳು

ಗುರುಗುಟ್ಟುತ್ತಿದ್ದವು ಹುಚ್ಚುಹಿಡಿಸುವ ನೀಲಿ ಬೋಗುಣಿಯಂತಿರುವ ಆಕಾಶದಲ್ಲಿ

 

- ಮತ್ತೆ, ಮರಗಳ ಶಿಖರಗಳಲ್ಲಿ, ಗಾಳಿಯ ಹೊದರಿನಲಿ 

ದೆವ್ವಗಳ ಗುಂಯಗುಡುವಿಕೆಯನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ?

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...