Friday, November 26, 2021

ನನ್ನ ಕಣ್ಣುಗಳ ಹಿಂದೆ NANNA KANNUGALA HIMDE - ULRIKE ALMUT SANDIG'S 'BEHIND MY EYES'

ಮೂಲBEHIND MY EYES 

ಕವಿಉಲ್ರೀಕ ಆಲ್ಮತ ಜ಼ಂಡಿಷ್ಜರ್ಮನಿ ULRIKE ALMUT SANDIG, GERMANY

Translated from the German into English by Karen Leeder

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ನನ್ನ ಕಣ್ಣುಗಳ ಹಿಂದೆ

 

ನನ್ನ ಕಣ್ಣುಗಳ ಹಿಂದೆ ಅನ್ಯರು ಕೂತು ನೋಡುತ್ತಾರೆ 

ನಾನು ನೋಡಿದ್ದನ್ನೆಲ್ಲವನ್ನೂ.  

ನಾನು ಕಾಣ ಬಲ್ಲದ್ದನ್ನು ಮಾತ್ರ ನಾನು ನೋಡುವೆ.

 

ರಾತ್ರಿಯಲ್ಲಿ ವರಾಂಡಾದ ಬೆಳಕಿನಲ್ಲಿ ಮುಂಗುಸಿಯ ನೋಡುವೆ 

ಫಾಕ್ಸ್‌ಗ್ಲವ್ ಪೊದೆಯ ಬುಡದಲ್ಲಿ, ಮಿಸುಕಾಡದೇ ಕೂತಿದೆ,

ಕಂದುವ ಬೆಳಕಿನಲ್ಲಿ ಅದೃಶ್ಯವಾಗುತ್ತಾ. 

 

ನನಗೆ ಧೂಮಕೇತುಗಳು ಕಾಣಿಸಲ್ಲ, ಉಪಗ್ರಹಗಳು ಕಾಣಿಸಲ್ಲ.  

ನನಗೆ ಏನೂ ಕಾಣಿಸಲ್ಲ ಚಂದ್ರನ ಚೂರೊಂದನ್ನು ಬಿಟ್ಟು 

ಮತ್ತು ಗಾಜಿನಲ್ಲಿ ನನ್ನದೇ ಪ್ರತಿಬಿಂಬ,

 

ಹಗಲಲ್ಲಿ ನನಗೆ ಕಾಣುತ್ತೆ ಅಂಗಳದ ಹಿಂದಿರುವ ತೋಟದ ಮಸಕು ಹಸಿರಿನ ಮಿಂಚು,

ಯಾಂತ್ರಿಕವಾಗಿ ಗೋಣು ಹಾಕುತ್ತಿರುವ ಪಾರಿವಾಳ; 

ಯಾವಾಗಲೂ ಅದೇ ಪೊದೆಯ ಮೇಲೆ.

 

ಮತ್ತೆ ಮೇಲೆ ಎತ್ತರದಲ್ಲಿ ಸುತ್ತಿ ಸುತ್ತಿ ದಾಳಿ ಮಾಡುವ ಜೆಟ್ ಪ್ಲೇನುಗಳು.  

ಅವನ್ನೂ ನಾನು ನೋಡುವೆ.

 

ಮತ್ತೆ ಅನ್ಯರ ಬಗ್ಗೆ ಹೇಳಬೇಕಾದರೆ, ನಾನವರನ್ನು ಆದಷ್ಟು ಕಡಿಮೆ ಕಾಣುತ್ತೇನೆ,

ಅವರು ನನ್ನನ್ನು ಕಾಣುವಂತೆ,

 

ಅವರು ನನ್ನೊಳು ಕೂತಿದ್ದಾರೆ ಆಳದಲ್ಲಿ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...