Friday, November 26, 2021

ಒಡಲರಿಮೆಯ ಕ್ಷಣ ODALARIMEYA KSHANA - MARIJA KNEŽEVIĆ'S 'ANATOMY MOMENT'

ಮೂಲ: ANATOMY MOMENT

ಕವಿ: ಮರಿಯಾ ಖ್ನೆಜ಼್ಎವಿಚ್, ಸರ್ಬಿಯಾ MARIJA KNEŽEVIĆ, SERBIA  

Translated from the Siberian into English by SIBELIAN FORRESTER

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಒಡಲರಿಮೆಯ ಕ್ಷಣ

 

ನಾನು ಸುಮ್ಮನಿರುತ್ತೇನೆ.

ಶೂನ್ಯಕ್ಕೆ ಬಾಯಿಲ್ಲ.  ಅದಕ್ಕೆಂದೂ ಸಾಂತ್ವನವಿಲ್ಲ. 

ಗರ್ಭದ ಗುಣವದು.  

ಅವಳ ಕರುಳಿನಿಂದ ಹೊರಟ ಸದ್ದು ಕಾಲಗಳನ್ನು ಕಿವುಡಾಗಿಸಿತು.

 

ನಾನು ಸುಮ್ಮನಿರುತ್ತೇನೆ ಮತ್ತೆ ಆ ಪದಗಳ ಬಳಸಿ ಪ್ರೇಮದ 

ಇಲ್ಲಮೆಯನ್ನು ಕೊಂಡಾಡುವೆ.

ಯಾಕೆಂದರೆ ಪ್ರತಿ ಕ್ಷಣವೂ ಒಂದು ಸಮಾರಂಭ,

ಸಮಯವೆಂಬುದು ಕ್ಷಣಿಕತೆಯ ಒಂದು ಸ್ಮಾರಕ ಮಾತ್ರ.”

 

ನಾವು ಸುಮ್ಮನಿರುತ್ತೇವೆ

ಅವರು ಸದ್ದು ಮಾಡುತ್ತಾರೆ ಪಿತೂರಿಗಳ ಬಗ್ಗೆ, 

ಹೊಸ ಪೀಠೋಪಕರಣಗಳ ಬಗ್ಗೆ.

ಅವರು ಕೊಠಡಿಗಳನು, ಧ್ವನಿವರ್ಧಕಗಳನು ಕೊಳ್ಳುತ್ತಾರೆ.  

ಅವರು ಶಸ್ತ್ರವೆತ್ತಿಕೊಳ್ಳುತ್ತಾರೆ.

ಅವರು ನಮ್ಮ ಕಡೆ ಗುರಿಯಿಡುತ್ತಾರೆ, ಉಸಿರೊಂದು ಕಟ್ಟುತ್ತೆ 

ಯಾವತ್ತೂ ವ್ಯಾಮೋಹವಿಲ್ಲದ್ದು,  

 

ಅವರು ಕೊಳ್ಳುತ್ತಾರೆ ಅವರು ಕೊಳ್ಳುತ್ತಾರೆ ಅವರು ಕೊಳ್ಳುತ್ತಾರೆ

ಅತಿವೇಗ ಹಾರುವ ಸಾಧನಗಳನ್ನು  

ಅತಿ ಕಡಿಮೆ ಸಮಯದಲ್ಲಿ ಅವರು

ಈ ಗ್ರಹವನ್ನು ಒಂದು ವದಂತಿಯ ಮಟ್ಟಕ್ಕೆ ಇಳಿಸುವರು

ನಾವು ಸೋಲುಂಡವರು ಎಂಬುದರ ಬಗ್ಗೆ, ಲೋಕದ ಅಂತ್ಯದ ಬಗ್ಗೆ,

 

ನಾವು ಸುಮ್ಮನಿರುತ್ತೇವೆಮತ್ತೆ ಆ ಪದಗಳ ಬಳಸಿ 

ಈ ಅಧ್ಯಾಯವನ್ನು ಬರೆದು ಮುಗಿಸುತ್ತೇವೆ.

“ಯಾಕೆಂದರೆ ಕೊನೆಯಿಲ್ಲದ ಕಥೆ ಮಾತ್ರವೇ ಕಥೆ,

ತನ್ನ ಅಂತ್ಯವನ್ನು ಒಪ್ಪಿಕೊಳ್ಳುವ ಕಥೆ ಕಥೆಯಲ್ಲ.”

 

ನೀನು ಸುಮ್ಮನಿರುತ್ತಿ.

ನಿನ್ನ ಕೂದಲು ಬೆಳೆಯುತ್ತಿರುವುದ ನಾನು ಗಮನಿಸುವೆ

ಸೂರ್ಯನಿಂದ ರಂಗಾದ ಬಿರುಗೂದಲಿನ ಕ್ರಾಂತಿಯಲ್ಲಿ

ಮಾರ್ಪಿನ ಕ್ರಿಯೆ ನೋಡುವೆ.

ಇಲ್ಲ, ನೀನು ಮಡಿಯಲಿಲ್ಲ, ಪ್ರಿಯೇ.

ಅವರು ಆ ಒಂದು ಎಲೆಗಾಗಿ ಒಂದು ಮರವ ಕೊಂಡರು

ಅದನ್ನು ನಾವು ಸುಡಬೇಕೆಂದು ನಿನ್ನ ಪತ್ರವಿತ್ತು ಅದರಲ್ಲಿ.

“ಯಾಕೆಂದರೆ ಯಾವುದು ಪುರಾವೆ ಅರಸುವುದಿಲ್ಲವೋ, ಅದೇ ಇರುತ್ತೆ,

ನಮ್ಮ ಅವಧಿಗಳ ಬಯಕೆಗಳಿಂದ ಬಚಾಯಿಸಲ್ಪಟ್ಟಿರುತ್ತೆ.”

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...