ಮೂಲ: A SKY CHART
ಕವಿ: ಅಬ್ದುರಹಮಾನ ಎ. ವಾಬೆರಿ, ಜಿಬೂಟಿ ABDOURAHMAN A. WABERI, DJIBOUTI
Translated from the French by NANCY NAOMI CARLSON
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಆಕಾಶ ನಕ್ಷೆ
ನಾನು ಕಪ್ಪಿನಲ್ಲಿ ಚಮಚ ಕಲಕಿಸಿ
ನಿರ್ಮೇಘ ನೀರಾಕಾಶವ ಕುಡಿಯುವೆ
ಹಿಗ್ಗಿದ ಸಮಯ ತನ್ನ ಗಾಯದ ಕಲೆಗಳನ್ನ ತೋರಿಸುತ್ತೆ
ನೀರು ಮತ್ತು ಹೂವುಗಳ ಅಲಂಕರಣಟ್ಟಿಯದು
ಕೈಬೀಸಿನ ಕ್ಷಿಪ್ರತೆಯಲ್ಲಿ ದಿನ ಉದಯಿಸುತ್ತೆ
ದೇವರ ಕೈಯೋ ಆಕಾಶದಿಂದ ಸುರಿದ ಅಮೃತವೋ?
*****
No comments:
Post a Comment