ಮೂಲ: TRUCE
ಕವಿ: ಅಬ್ದುರಹಮಾನ ಎ. ವಾಬೆರಿ, ಜಿಬೂಟಿ ABDOURAHMAN A. WABERI, DJIBOUTI
Translated from the French by NANCY NAOMI CARLSON
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಕದನ ವಿರಾಮ
ನನ್ನ ದನಿಯ ಊರೆಲ್ಲಾ ಚೆಲ್ಲುವೆ
ಅಲ್ಲಿ ನೀರು ಸಮಯದ ಆಕೃತಿಯ ಬಿಡಿಸುತ್ತೆ
ರಾತ್ರಿಯಲಿ ಉದಿಸಿದ ಸುವಾಸನೆಗಳೊಂದಿಗೆ
ನನ್ನ ದೇಹವ ಬೆರೆಸುವೆ
ನನ್ನ ದುಗುಡಗಳನ್ನು ಅಲ್ಲಿ ಮುಳುಗಿಸುವೆ
ನಿನ್ನ ಕಣ್ಗಳಲಿ ಹುಡುಕುವೆ ನಮ್ಮ ಗತಕಾಲದ ಜಗಳಗಳನು
ಸೋತ ಕುಲಗಳು ಕಲಹಗಳ ಚಿತ್ರವನ್ನು ನೇಯ್ಯುತ್ತವೆ
ನನ್ನ ಕೋಮಲ ಸ್ಮೃತಿಯನ್ನು ಹಿಂದಿರುಗಿಸೆಂದು
ತಿರುಳ್ಭರಿತ ಗಿಡಗಳ ನಾ ಕೇಳುವೆ
ಖಾತ್ರಿಯಿಲ್ಲ ನಿನಗೆ, ಆಲಿಸುವೆ
ನನ್ನ ಬಿರುಕುಗಳ ಗಿರ್ರಾಟವ
ನಾಳಿನ ವರೆಗೆ ಮುಂದೂಡು
ರಾತ್ರಿಯ ಬರುವಿಕೆಯ
*****
No comments:
Post a Comment