ಮೂಲ: THE DOOR
ಕವಿ: ಮಿರೊಸ್ಲಾವ್ ಹೊಲುಪ್, ಚೆಕ್ ರಿಪಬ್ಲಿಕ್ MIROSLAV HOLUB, CZECH REPUBLIC
Translated from the Czech into English by Ian Milner
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ಬಾಗಿಲು
ಹೋಗು ... ಬಾಗಿಲು ತೆರೆ. ಹೊರಗೆ
ಇರಬಹುದೇನೋ
ಒಂದು ಮರ ಅಥವಾ
ಒಂದು ಅಡವಿ ಅಥವಾ
ಒಂದು ಉದ್ಯಾನ ಅಥವಾ
ಒಂದು ಜಾದೂ ನಗರಿ.
ಹೋಗು ... ಬಾಗಿಲು ತೆರೆ.
ಇರಬಹುದೇನೋ ಏನನ್ನೋ
ಹುಡುಕುತ್ತಿರುವ ಒಂದು ನಾಯಿ,
ಕಾಣಬಹುದೇನೋ ನೀನು
ಒಂದು ಮುಖವನ್ನು ಅಥವಾ
ಒಂದು ಕಣ್ಣನ್ನು ಅಥವಾ
ಒಂದು ಚಿತ್ರದ ಚಿತ್ರವನ್ನು.
ಹೋಗು ... ಬಾಗಿಲು ತೆರೆ.
ಹೊರಗೆ ಮಂಜು ಕವಿದಿರುವುದಾದರೆ
ಅದು ಕರಗುತ್ತೆ.
ಹೋಗು ... ಬಾಗಿಲು ತೆರೆ.
ಬರೀ ಕತ್ತಲೆ ಕಾಲ ಕಳೆಯುತ್ತಿರಬಹುದು,
ಬರೀ ಪೊಳ್ಳು-ಗಾಳಿ ಬೀಸುತ್ತಿರಬಹುದು,
ಅಲ್ಲಿ ಏನಿಲ್ಲದಿದ್ದರೂ ಸರಿ ...
ಹೋಗು ... ಬಾಗಿಲು ತೆರೆ
ಕಡೇ ಪಕ್ಷ ಇರಬಹುದು ತಂಗಾಳಿ.
*****
No comments:
Post a Comment