Original Kannada: EE GUDIGE BAAGILE: ILLA
ಈ ಗುಡಿಗೆ ಬಾಗಿಲೇ ಇಲ್ಲ...
POET: SAVITHA NAGABHUSHANA
English translation: S. Jayasrinivasa Rao
THIS SHRINE HAS NO DOORS AT ALL
No doors at all to this shrine
No one stops you at every step
God is not imprisoned here!
Piety itself is the fire offering here ...
Purity impurity, Shiva sees not!
They touch they smell ...
they rub their faces
they pull ears ... they grab they embrace
they cry they wail they lighten up
Flowers and fruit and meat and mead
the whole array they offer they bow
the puny people ...
Beasts and birds and bugs and germs
feast on food, sated elated
All creatures are one
they deem
They beg they give
they nag they sing
they ache they suffer
they do they die
Shiva is most content here ...
Believers’ buddy – their closest mate
ಈ ಗುಡಿಗೆ ಬಾಗಿಲೇ ಇಲ್ಲ...
ಈ ಗುಡಿಗೆ ಬಾಗಿಲೇ ಇಲ್ಲ...
ಅಡಿಗಡಿಗೆ ತಡೆಯುವರಿಲ್ಲ
ದೇವರಿಲ್ಲಿ ಬಂಧಿಯೂ ಅಲ್ಲ!
ಭಕುತಿಯೇ ಆರತಿ ಎಲ್ಲಾ...
ಮಡಿ ಮೈಲಿಗೆ ಶಿವನೂ ಒಲ್ಲ!
ಮುಟ್ಟುವರು ಮೂಸುವರು...
ಮೊಕ ಮುಸುಡಿಯ ತೀಡುವರು
ಕಿವಿ ಹಿಂಡುವರು... ಬಾಚಿ ತಬ್ಬಿ
ಅತ್ತು ಕರೆದು ಹಗುರಾಗುವರು...
ಹೂವು ಹಣ್ಣು- ಮಾಂಸ-ಮದ್ಯ
ಬಗೆ ಬಗೆ ಎಡೆ ಇಕ್ಕಿ ಬಾಗುವರು.
ಹುಲು ಮಾನವರು...
ಪಶು ಪಕ್ಷಿ ಕ್ರಿಮಿ ಕೀಟಗಳು
ಉಂಡು ಸಂತಸಗೊಳಲು
ಸಕಲ ಜೀವಗಳು ಒಂದೇ
ಎಂದು ತಿಳಿಯುವರು.
ಬೇಡುವರು...ನೀಡುವರು...
ಕಾಡುವರು...ಹಾಡುವರು...
ನೋಯುವರು...ಬೇಯುವರು..
ಗೇಯುವರು...ಸಾಯುವರು...
ಶಿವನಿಲ್ಲಿ ಸಂತೃಪ್ತ.....
ಭಕುತರ ಮಿತ್ರ-ಪರಮಾಪ್ತ....
*****
No comments:
Post a Comment